ಹಾವೇರಿ: ಅರಣ್ಯ ಇಲಾಖೆಯ ಇಬ್ಬರು ಆರ್ ಎಫ್ ಒ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ಇಬ್ಬರು ಆರ್ ಎಫ್ ಓ ಅಧಿಕಾರಿಗಳ ಮನೆ ಸೇರಿದಂತೆ ವಿವಿಧಡೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಾದ ಆರ್ ಎಫ್ ಓ ಪರಮೇಶ್ವರ ಪೇಲನವರ, ಆರ್ ಎಫ್ ಓ ಮಹಾಂತೇಶ ನ್ಯಾಮತಿಗೆ ಸೇರಿದ ಹಾವೇರಿ, ಕುರುಬಗೊಂಡ ಸೇರಿದಂತೆ ವಿವಿಧಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆರ್ ಎಫ್ ಓ ಪರಮೇಶ್ವರ ಪೇಲನವರ ಅವರ ಮೂರು ಮನೆ ಸೇರಿದಂತೆ 6 ಕಡೆ, ಮಹಾಂತೇಶ ನ್ಯಾಮತಿ ಅವರ ಮನೆ, ಫಾರ್ಮ್ ಹೌಸ್ ಸೇರಿದಂತೆ ವಿವಿಧಡೆ ದಾಳಿ ನಡೆಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.