ಇಂದಿನಿಂದ ವಿಧಾನಮಂಡಲ ಅಧಿವೇಶನ.. ಸದನ ಸಮರಕ್ಕೆ ಕಾಂಗ್ರೆಸ್​, ಜೆಡಿಎಸ್, ಬಿಜೆಪಿ ಸಜ್ಜು..!

Advertisement

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಶುರುವಾಗಲಿದ್ದು, ಸದನ ಸಮರಕ್ಕೆ ಕಾಂಗ್ರೆಸ್​, ಜೆಡಿಎಸ್, ಬಿಜೆಪಿ ಸಜ್ಜಾಗಿದೆ.

ಕೋಲಾಹಲ ಸೃಷ್ಟಿಗೆ ಕಾಂಗ್ರೆಸ್​ ಕಾದಿದ್ದು, ಸಿದ್ದು ಸರ್ಕಾರದ ಹಗರಣ ಅಸ್ತ್ರ ರೆಡಿ ಮಾಡಿದೆ ಬಿಜೆಪಿ.
ಕಾಂಗ್ರೆಸ್​, ಬಿಜೆಪಿಗೆ ಸೆಡ್ಡು ಹೊಡೆಯಲು ದಳಪತಿಗಳ ರಣತಂತ್ರ ಹೂಡಿದ್ದಾರೆ. 10 ದಿನಗಳ ಮಳೆಗಾಲದ ಅಧಿವೇಶನದಲ್ಲಿ ಗುಡುಗು-ಸಿಡಿಲು ಗ್ಯಾರೆಂಟಿಯಾಗಿದ್ದು, ಇಂದು ಅಗಲಿದ ಗಣ್ಯರಿಗೆ ಸಂತಾಪ..ಆನಂತರ ಪ್ರತಾಪ ತೋರಿಸಲಾಗುತ್ತದೆ.
ವಿಧಾನಮಂಡಲ ಅಧಿವೇಶನ ನಾಳೆಯಿಂದ ರಂಗು ಪಡೆಯಲಿದೆ. ಕಾಂಗ್ರೆಸ್​ ಸರ್ಕಾರದ ವಿರುದ್ದ ಚಾರ್ಜ್​ ಶೀಟ್​ ರೆಡಿ ಮಾಡಿದ್ದು, 40 % ಕಮಿಷನ್​ ಆರೋಪ, ಮಳೆ ಹಾನಿ ಪರಿಹಾರ ವಿಳಂಬ, ಬೆಂಗಳೂರಿನ ಮಳೆ ಅವಾಂತರ, ರಾಜಕಾಲುವೆ ಒತ್ತುವರಿ, ರಾಜ್ಯದ ಕಾನೂನು ಸುವ್ಯವಸ್ಥೆ ಸೇರಿ ಹಲವು ಅಸ್ತ್ರಗಳು ರೆಡಿಯಾಗಿದೆ. ಅರ್ಕಾವತಿ ಲೇಔಟ್ ವಿಚಾರ, PSI, ಶಿಕ್ಷಕರ ನೇಮಕಾತಿ ಪ್ರಕರಣ, ಮಳೆ ಹಾನಿಯನ್ನೇ ಪ್ರಮುಖ ಅಸ್ತ್ರ ಮಾಡಿಕೊಳ್ಳಲಿದೆ ಜೆಡಿಎಸ್.