ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ

Advertisement

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ,
ಏ.15ರ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಈ ಬಾರಿಯೂ ಅರ್ಚಕ ಎ. ಜ್ಞಾನೇಂದ್ರ ಕರಗ ಹೊರಲಿದ್ದು, ಜ್ಞಾನೇಂದ್ರ ಅವರು ಹದಿಮೂರನೇ ಬಾರಿ ಹೊರುತ್ತಿರುವ ಕರಗ ಇದಾಗಿದೆ.
ಕರಗದ 9 ದಿನಗಳು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದ್ದು, 20ರಂದು ಆರತಿ ದೀಪ ಬೆಳಗುವ ಕಾರ್ಯಕ್ರಮ ನಡೆಯಲಿದೆ. ಏ.15ರಂದು ರಾತ್ರಿ 10 ಗಂಟೆಗೆ ದೇವರ ಉತ್ಸವ ನಡೆ ಯಲಿದ್ದು, ಮುಂಜಾನೆ 3 ಗಂಟೆಗೆ ಧ್ವಜಾರೋಹ ಣದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಏ.23ರ ಚೈತ್ರ ಪೌರ್ಣಿಮೆ ದಿನವಾದ ಮಂಗಳವಾರ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ ಹಾಗೂ ಕರಗ ಶಕ್ತೋ್ಯತ್ಸವ ವಿಜೃಂಭಣೆಯಿಂದ ಜರುಗಲಿದೆ.