ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ: ಸುಧಾಕರ್

Side view of young female surgeon tying her surgical mask
Advertisement

ಬೆಂಗಳೂರು: ಇಂದಿನಿಂದ ಎಲ್ಲಾ ಆರೋಗ್ಯ ಸಿಬ್ಬಂದಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಸೂಚಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, H3N2 ನಿಂದ ದೇಶದಲ್ಲಿ ಸೋಂಕು ಹೆಚ್ಚಳವಾಗಿದೆ. ಅನೇಕರು ಗಾಬರಿಯಾಗಿದ್ದಾರೆ. ಹೀಗಾಗಿ ಉನ್ನತ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿದೆವು. ಗಾಬರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಹಾಗಂತ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದರು.
ಶುಚಿತ್ವದ ಬಗ್ಗೆ ಗಮನ ಕೊಡಬೇಕು. ಕೆಮ್ಮುವಾಗ, ಸೀನುವಾಗ ಮುಖ ಕವರ್ ಮಾಡಿಕೊಳ್ಳಬೇಕು. ಕೈಯನ್ನು ಆಗಾಗ ಸೋಪಿನಿಂದ ತೊಳೆದುಕೊಳ್ಳಬೇಕು ಎಂದು ಹೇಳಿದರು. ಫೆಬ್ರವರಿಯಲ್ಲಿಯೇ ತಾಪಮಾನ ಹೆಚ್ಚಾಗಿದೆ. ಹವಾಮಾನ ವೈಪರೀತ್ಯವೂ ಕಾರಣವಾಗಿದೆ. ಹೀಟ್ ವೇವ್ ನಿಂದ ಜನ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. 11 ರಿಂದ 3 ಗಂಟೆ ಅನಗತ್ಯವಾಗಿ ಬಿಸಿಲಿಗೆ ನೇರವಾಗಿ ಹೋಗಬೇಡಿ. ಹೀಟ್ ವೇವ್ ನಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಹೆಚ್ಚು ನೀರು ಕುಡಿಯಿರಿ. ಮಜ್ಜಿಗೆ ಎಳನೀರು ಸೇವಿಸಿ ಎಂದು ಸಚಿವರು ಸಲಹೆ ನೀಡಿದರು. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 391 ಸಕ್ರಿಯ ಕೋವಿಡ್ ಪ್ರಕರಣಗಳನ್ನು ಹೊಂದಿದೆ ಮತ್ತು ಧನಾತ್ಮಕತೆಯ ಪ್ರಮಾಣವು ಶೇಕಡಾ 2.44 ಕ್ಕೆ ಏರಿದೆ. ರಾಜ್ಯದಲ್ಲಿ 26 ಜನರಲ್ಲಿ ಹೆಚ್​3ಎನ್2 ಸೋಂಕು ಪತ್ತೆಯಾಗಿದೆ. ಹೆಚ್​3ಎನ್2 ಸೋಂಕಿನಿಂದ 15 ವರ್ಷದ ಒಳಗಿನ ಮಕ್ಕಳಿಗೆ ಹೆಚ್ಚು ಅಪಾಯವಿದೆ. 60 ವರ್ಷ ಮೆಲ್ಪಟ್ಟವರಿಗೂ ಇದು ಸುಲಭವಾಗಿ ಹರಡುತ್ತೆ. ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸಬೇಕು ಈ ಸಂಬಂಧ ಆರೋಗ್ಯ ಇಲಾಖೆ ಇಂದು ಪ್ರತ್ಯೇಕ ಮಾರ್ಗಸೂಚಿ ನೀಡುತ್ತೆ. ಹೆಚ್​3ಎನ್2 ಕೂಡಾ ಕೊವಿಡ್ ಟೆಸ್ಟ್ ರೀತಿಯಲ್ಲಿಯೇ ಮಾಡಲಾಗುವುದು. ಸ್ವ್ಯಾಬ್​ ಟೆಸ್ಟ್ ಮೂಲಕ ಹೆಚ್​3ಎನ್2 ವೈರಸ್ ಪತ್ತೆ ಹಚ್ಚಬಹುದು ಎಂದಿದ್ದಾರೆ