‘ಆಪರೇಷನ್ ಎಲಿಫೆಂಟ್’ ಸಕ್ಸಸ್‌

ಎಲಿಫೆಂಟ್
Advertisement

ಕಡಬ: ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಪುಂಡಾನೆಯನ್ನು ಸೆರೆ ಹಿಡಿಯಲು ಮೂರು ದಿನಗಳಿಂದ ನಡೆದ ಕಾರ್ಯಾಚರಣೆ ಗುರುವಾರ ಯಶಸ್ಸು ಆಗಿದೆ.
ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು (ಮಂಡಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಸಿಬ್ಬಂದಿ ಗನ್ ಮೂಲಕ ಆನೆಗೆ ಅರಿವಳಿಕೆ ಇಂಜೆಕ್ಷನ್ ನೀಡಿದ್ದಾರೆ.
ಫೆ. 20ರಂದು ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52) ಮೃತಪಟ್ಟಿದ್ದರು, ಇದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಘಟನೆ ನಡೆದ ರಾತ್ರಿಯೇ ಮೈಸೂರಿನಿಂದ 5 ಆನೆಗಳನ್ನು ಪುಂಡಾನೆ ಬಂಧನದ ಕಾರ್ಯಾಚರಣೆಗೆ ತರಲಾಗಿತ್ತು. ಫೆ. 21ರಂದು ಡೋಣ ಕ್ಯಾಮೆರಾ ಬಳಸಿ ನರಹಂತಕ ಆನೆಯನ್ನು ಪತ್ತೆ ಹಚ್ಚಿದ್ದು, ಅಭಿಮನ್ಯು ಆನೆ ಮೂಲಕ ಸೆರೆ ಹಿಡಿಯುವ ಕಾರ್ಯಾಚರಣೆಯು ರೆಂಜಲಾಡಿ ಗ್ರಾಮದ ತುಂಬೆ ರಕ್ಷಿತಾರಣ್ಯದಲ್ಲಿ ಆರಂಭಗೊಂಡಿತ್ತು.
ಆದರೆ, ನಿನ್ನೆ ಆನೆಗೆ ಅರಿವಳಿಕೆ ನೀಡುವ ಪ್ರಯತ್ನ ವಿಫಲಗೊಂಡಿತ್ತು. ಗುರುವಾರ ಸಂಜೆ ಮತ್ತೆ ಆನೆಯನ್ನು ಪತ್ತೆ ಹಚ್ಚಿ ಅರಿವಳಿಕೆ ಮದ್ದು ಶೂಟ್ ಮಾಡಿ ಆನೆಯನ್ನು ಸೆರೆ ಹಿಡಿವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.