ಮಂಗಳೂರು: ಆನೆಯ ಫುಟ್ಬಾಲ್ ಆಟ ಫುಲ್ ವೈರಲ್ ಆಗಿದೆ.
ಹೌದು, ಇಲ್ಲಿನ ಕಟೀಲು ದೇವಾಲಯದಲ್ಲಿರುವ ಮಹಾಲಕ್ಷ್ಮೀ ಹೆಸರಿನ 31 ವರ್ಷದ ಆನೆಯ ಫುಟ್ಬಾಲ್ ಆಟ ಎಲ್ಲರ ಗಮನ ಸೆಳೆದಿದೆ. ಮಾವುತ ನಿತ್ಯವೂ ಆನೆಗೆ ಫುಟ್ಬಾಲ್ ತರಬೇತಿ ನೀಡುತ್ತಿದ್ದಾನೆ.
ಅಷ್ಟೇ ಅಲ್ಲ, ಈ ಆನೆ ನಿತ್ಯವೂ ಫುಟ್ಬಾಲ್ ಸೇರಿ ಬಾಸ್ಕೆಟ್ ಬಾಲ್, ಕ್ರಿಕೆಟ್ ಆಟ ಆಡುತ್ತದೆ. ಮಾವುತ ಫೈರೋಝ್, ಅಲ್ತಾಫ್‌ನಿಂದ ನಿತ್ಯ ತರಬೇತಿ ನೀಡುತ್ತಿದ್ದಾರೆ.