`ಆಕಾಶದ ಗುಡ್ಡಕ್ಕೆ ಶಿಶು ಏರಿತಲೆ ಪರಾಕ್’

ಕಾರ್ಣಿಕ
Advertisement

ರಾಣೇಬೆನ್ನೂರು: ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಶ್ರೀ ಮಾಲತೇಶಸ್ವಾಮಿ ಸನ್ನಿಧಿಯಲ್ಲಿ ಮಂಗಳವಾರ ಮಹಾನವಮಿಯಂದು ಸಂಜೆ 6ಕ್ಕೆ ಜರುಗಿದ ಕಾರ್ಣಿಕೋತ್ಸವದಲ್ಲಿ `ಆಕಾಶದ ಗುಡ್ಡಕ್ಕೆ ಶಿಶು ಏರಿತಲೆ ಪರಾಕ್’ ಎಂದು 21ಅಡಿ ಬಿಲ್ಲನೇರಿ ಗೊರವಯ್ಯ ನಾಗಪ್ಪ ದುರ್ಗಪ್ಪ ಉರ್ಮಿ ಕಾರ್ಣಿಕ ನುಡಿದರು.
ಗೊರವಪ್ಪನ ದೇಹ ಯಾವ ಕಡೆ ಬೀಳುತ್ತೆ, ತಲೆ ಯಾವ ಕಡೆ ಬೀಳುತ್ತೆ ಎಂದು ನೋಡಲಾಗುತ್ತಿದೆ. ಆ ಕಡೆ ಒಳ್ಳೆಯ ಬೆಳೆ ಮಳೆಯಾಗುತ್ತೆ ಎಂದು ಭಕ್ತರು ನಂಬುತ್ತಾರೆ. ಕಾರ್ಣಿಕವಾಗುತ್ತಿದ್ದಂತೆ ಭಕ್ತರು ಪ್ರಸ್ತುತ ಕಾರ್ಣಿಕದ ಅರ್ಥವನ್ನು ವಿಶ್ಲೇಷಿಸಿದರು. ಈ ಸಲದ ಕಾರ್ಣಿಕ ಕುರಿತು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷಭಟ್ ಗುರೂಜಿ ವ್ಯಕ್ತಪಡಿಸಿದ ವಿಶ್ಲೇಷಣೆ ಪ್ರಕಾರ, ಸಣ್ಣಸಣ್ಣ ರೈತರಿಗೂ ಉತ್ತಮವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಸಂತೋಷಭಟ್ಟ ಗೂರೂಜಿ ತಿಳಿಸಿದರು.

ಕಾರ್ಣಿಕೋತ್ಸವ