ಆಕಾಶದೆಡೆ ಗುಂಡು ಹಾರಿಸಿದ ವೀಡಿಯೋ ವೈರಲ್

ಪತ್ನಿಗೆ ಬೆದರಿಸಿದ ಪತಿ
Advertisement

ಶಿವಮೊಗ್ಗ: ನಗರದ ಹೊರವಲಯದ ಮಾಚೇನಹಳ್ಳಿಯ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಬಳಿ ಹೆದ್ದಾರಿ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಕಾರನ್ನು ನಿಲ್ಲಿಸಿ, ಏರ್ ಗನ್ ಹಿಡಿದು ಆಕಾಶದ ಕಡೆಗೆ ಗುಂಡು ಹಾರಿಸಿದ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.
ಇದರ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ವಿಡಿಯೋ ಪರಿಶೀಲಿಸಿದಾಗ ಡಿ.೨೬ ರಂದು ಘಟನೆ ನಡೆದಿರುವುದು ತಿಳಿದುಬಂದಿದೆ. ವಿಡಿಯೋವನ್ನು ಆಧಾರ ವಾಗಿಟ್ಟುಕೊಂಡು ತುಂಗ ನಗರ ಪಿಎಸ್‌ಐ ರಘುವೀರ್ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದರು. ದೂರಿನ ಆಧಾರದ ಮೇರೆಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಕ್ಕಗಮಗಳೂರಿನ ಸಿರಗನಹಳ್ಳಿಯ ಹರ್ಷ ಪಟೇಲ್ (೨೩) ಹಾಗೂ ಅಜ್ಜಂಪು ರದ ಅಭಿಷೇಕ್ (೨೩) ಬಂಧಿತರು. ಒಂದು ಏರ್‌ಗನ್ ಹಾಗೂ ಕಾರನ್ನು ಪೊಲೀ ಸರು ವಶಪಡಿಸಿಕೊಂಡಿದ್ದಾರೆ.