ಲಖನೌ: ಉತ್ತರ ಪ್ರದೇಶದ ಬಾಗಪತ್‌ನಲ್ಲಿ ಅಪಘಾತದಲ್ಲಿ ಮೃತಪಟ್ಟ ಎರಡು ವರ್ಷದ ಬಾಲಕನ ಶವ ಒಯ್ಯಲು
ಆಸ್ಪತ್ರೆ ಅಧಿಕಾರಿಗಳು ಆಂಬುಲೆನ್ಸ್ ನಿರಾಕರಿಸಿದ ಪರಿಣಾಮ ಅಸಹಾಯಕನಾದ ಸಹೋದರ ಕೈಗಳಿಂದಲೇ ಶವ ಹೊತ್ತೊಯ್ದ ಹೃದಯವಿದ್ರಾವಕ ಘಟನೆಯಿದು.
ನಿರಂತರವಾಗಿ ಅಳುತ್ತಿ ಹಸುಳೆಯನ್ನು ಕೋಪದಿಂದ ಮಲತಾಯಿ ಮನೆಯಿಂದ ಹೊರಕ್ಕೆ ಎಸೆದಾಗ ವೇಗವಾಗಿ ಬಂದ ಕಾರಿಗೆ ಸಿಲುಕಿ ಮಗು ಸ್ಥಳದಲ್ಲೇ ಸಾವನ್ನಪ್ಪಿತು. ಮರಣೋತ್ತರ ಪರೀಕ್ಷೆ ನಂತರ ಮಗುವಿನ ಶವವನ್ನು ತಂದೆ ಪ್ರವೀಣ್ ಕುಮಾರ್‌ಗೆ ಹಸ್ತಾಂತರಿಸಲಾಯಿತು. ದಿನಗೂಲಿ ಕಾರ್ಮಿಕನಾಗಿರುವ ತಂದೆ ಶವ ಕೊಂಡೊಯ್ಯಲು ಆಂಬುಲೆನ್ಸ್ ನೀಡುವಂತೆ ಆಸ್ಪತ್ರೆ ಅಧಿಕಾರಿಗಳನ್ನು ಕೇಳಿದಾಗ ಅವರು ನಿರಾಕರಿಸಿದರು. ಇದರಿಂದ ತಂದೆ ಕಂಗೆಟ್ಟಾಗ ಜೊತೆಯಲ್ಲಿ ಆತನ ಪುತ್ರ ೧೦ ವರ್ಷದ ಸಾಗರ್ ತನ್ನ ಕೈಗಳಲ್ಲೇ ಮಗುವಿನ ಶವ ಹೊತ್ತು ಬಾಗಪತ್‌ನ ರಸ್ತೆಗಳಲ್ಲಿ ನಡೆಯಬೇಕಾಯಿತು. ಸ್ಥಳೀಯರು ಈ ಹೃದಯ ವಿದ್ರಾವಕ ದೃಶ್ಯವನ್ನು ನೋಡಿದರಾದರೂ ಯಾರೂ ನೆರವಿಗೆ ಬರಲಿಲ್ಲ.