ಅಹಲೈಯ ಪರಿ ರಕ್ಷಣೆ

ಗುರುಬೋಧೆ
Advertisement

ಹಿಂದೊಮ್ಮೆ ಗೌತಮರ ಅಧಿಕ ಪುಣ್ಯವನ್ನು ಕಡಿಮೆ ಮಾಡುವುದಕ್ಕಾಗಿ ದೇವೇಂದ್ರನು ಅಹಲ್ಯೆಯ ಸಮಾಗಮವನ್ನು ಮಾಡಿದ್ದನು. ಗೌತಮರು ಇದರಿಂದ ಸಿಟ್ಟುಗೊಂಡು ಅವರ ಕಲ್ಲಾಗು ಎಂಬುದಾಗಿ ಶಾಪವನ್ನು ನೀಡಿದ್ದರು.
ಆಗ ಶ್ರೀರಾಮಚಂದ್ರನ ದರ್ಶನದಿಂದ ಮನುಷ್ಯತ್ವವನ್ನು ಹೊಂದಿದಳು. ಶ್ರೀರಾಮಚಂದ್ರನು ಅವಳಿಗೆ ಅನುಗ್ರಹ ಮಾಡಿ ಗೌತಮರ ಜೊತೆ ಸೇರಿಸಿದನು. ದೇವತೆಗಳಿಗೆ ತನ್ನ ಬಗ್ಗೆ ಎಷ್ಟು ಭಕ್ತಿಯು ಇರುತ್ತದೋ ಅಷ್ಟೇ ಅನುಗ್ರಹ ಬುದ್ಧಿಯನ್ನು ಪರಮಾತ್ಮನು ತೋರಿಸುತ್ತಾನೆ. ಇದಕ್ಕೆ ಅಹಲ್ಯೆಯ ಕಥೆಯೇ ದೃಷ್ಟ್ಟಾಂತವಾಗಿದೆ. ದೇವೇಂದ್ರನ ಅಪೇಕ್ಷೆಯಂತೆ ಅಹಲ್ಯೆಯನ್ನು ಸ್ತ್ರೀಯನ್ನಾಗಿ ಮಾಡಿ, ಅವಳಿಂದ ಸತ್ಕಾರ ಪಡೆದು ಮುನ್ನಡೆದನು.
ಶ್ರೀರಾಮಚಂದ್ರನು ಲಕ್ಷ್ಮಣನ ಜೊತೆ ವಿದೇಹ ಪಟ್ಟಣವನ್ನು ಪ್ರವೇಶಿಸಿದಾಗ ಅವನ ಸೌಂದರ್ಯವನ್ನು ಎಲ್ಲ ವಿದೇಹ ಜನರು ಅನುಭವಿಸಿದರು. ಅವನ ಶ್ಯಾಮವರ್ಣದ ದೇಹ ಸೂರ್ಯನಂತೆ ಬೆಳಗುವ ಅನಂತಚಂದ್ರರ ಕಾಂತಿಯನ್ನು ಮೀರಿಸುವ ಮನಮೋಹಕವಾದ ರೂಪ. ಜಗತ್ತಿನ ಏಕೈಕ ಸಾರಭೂತವಾದ ದಿವ್ಯತೆ. ಇವನನ್ನು ಕಂಡು ಜನ ತಾವೇ ಧನ್ಯರೆಂದರು. ಶ್ರೀರಾಮಚಂದ್ರನ ಮುಖಕಮಲವನ್ನು ಕಣ್ಣುಗಳೆಂಬ ದುಂಬಿಯಿಂದ ಪುನಃ ಪುನಃ ಆಸ್ವಾದನೆ ಮಾಡಿದರು.
ಶ್ರೀರಾಮಚಂದ್ರನು ಲಕ್ಷ್ಮಣನ ಜೊತೆ ಕೂಡಿ ವಿಶ್ವಾಮಿತ್ರರ ಮಾರ್ಗದರ್ಶನದಲ್ಲಿ ಜನಕನ ಅರಮನೆಯನ್ನು ಪ್ರವೇಶಿಸಿದ ಇದರಿಂದ ಜನಕನಿಗೆ ಅಪಾರ ಆನಂದವಾಯಿತು. ಅತ್ಯಂತ ಭಕ್ತಿಶ್ರದ್ಧೆಗಳಿಂದ ಶ್ರೀರಾಮಚಂದ್ರನನ್ನು ಲಕ್ಷ್ಮಣನನ್ನು ಹಾಗೂ ಅಗ್ನಿಯಂತಿರುವ ವಿಶ್ವಾಮಿತ್ರರನ್ನು ಸತ್ಕಾರ ಮಾಡಿದನು.
ತನ್ನ ಮಗಳಿಗೆ ಅನುರೂಪನಾದ ವರ ಇವನೊಬ್ಬನೇ ಎಂಬುದಾಗಿಯೂ ತಿಳಿದುಬಿಟ್ಟನು. ಅದೇ ಸಂದರ್ಭದಲ್ಲಿ ವಿಶ್ವಾಮಿತ್ರ ಋಷಿಗಳು ಶ್ರೀರಾಮಚಂದ್ರನನ್ನು ನಿನ್ನ ಅಳಿಯನನ್ನಾಗಿ ಸ್ವೀಕರಿಸು ಎಂದು ಹೇಳಿದರು. ಆಗ ಜನಕರಾಜನು ಭಕ್ತಿಯಿಂದ ವಿಶ್ವಾಮಿತ್ರರ ಮುಂದೆ ಹೀಗೆ ಪ್ರಾರ್ಥಿಸುತ್ತಾನೆ. ತಾವು ಹೇಳಿದಂತೆಯೇ ನಡೆದುಕೊಳ್ಳುತ್ತೇನೆ. ಇದರಲ್ಲಿ ಪುನಃ ವಿಚಾರ ಮಾಡಬೇಕಾದ ಅಂಶವು ಇರುವುದಿಲ್ಲ. ಆದರೂ ನನ್ನ ಮಗಳನ್ನು ಇಂಥವರಿಗೆ ಧಾರೆಯೆರೆದು ಕೊಡಬೇಕೆಂದು ನಾನು ಒಂದು ಶಪಥವನ್ನು ಮಾಡಿರುತ್ತೇನೆ. ಅದನ್ನು ದಯವಿಟ್ಟು ಕೇಳಿರಿ. ಯಾರಿಂದಲೂ ಎತ್ತಲು ಸಾಧ್ಯವಾಗದ ಆಯುಧವನ್ನು ನಾನು ರುದ್ರದೇವರಿಂದ ಪಡೆದುಕೊಂಡಿದ್ದೇನೆ. ರುದ್ರದೇವರನ್ನು ಬಿಟ್ಟು ಬೇರೆ ಯಾರಿಂದಲೂ ಅದು ಅಲುಗಾಡಿಸಲು ಕೂಡ ಸಾಧ್ಯವಿಲ್ಲ. ಹೀಗಿರುವಾಗ ಮನುಷ್ಯರಂತೂ ಸುತರಾಂ ಅದನ್ನು ಎತ್ತಲಾರರು. ಅದಕ್ಕೆ ಸಮರ್ಥನಾದವನು ಅರ್ಹತೆ ಮತ್ತು ಯೋಗ್ಯತೆ ಪಡೆಯುತ್ತಾನೆ. ಅಲ್ಲದೇ ಯೋಗವೂ ಕೂಡಿ ಬರುತ್ತದೆ.