ಅಸ್ಥಿರ ಸರ್ಕಾರದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು

ಮೋದಿ
Advertisement

ಕೋಲಾರ: ರಾಜ್ಯದಲ್ಲಿ ಅಸ್ಥಿರ ಸರ್ಕಾರ ಅಧಿಕಾರಕ್ಕೆ ಬಂದರೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಅಸ್ಥಿರ ಸರ್ಕಾರದಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು. ದಶಕದಿಂದ ನನೆಗುದಿಗೆ ಬಿದ್ದಿದ್ದ ಹಲವು ಕಾಮಗಾರಿಗಳು, ಯೋಜನೆಗಳನ್ನು ಬಿಜೆಪಿ ಪೂರ್ಣಗೊಳಿಸಿದೆ. ಬಿಜೆಪಿಗೆ ನೀವು ನೀಡುವ ಒಂದು ಮತದಿಂದ ಸಾಕಷ್ಟು ಬದಲಾವಣೆಯಾಗುತ್ತಿದೆ ಎಂದರು.

ಕಾಂಗ್ರೆಸ್‌ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕಿತ್ತು. ಆದರೆ, ಹಾವಿನ ಬಗ್ಗೆ, ಹಾವಿನ ವಿಷದ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಇದರ ಬಗ್ಗೆ ನನಗೆ ಬೇಸರವಿಲ್ಲ. ಹಾವು ಶಿವನ ಕೊರಳಿನಲ್ಲಿರುತ್ತದೆ. ನನಗೆ ಈ ದೇಶದ ಜನತೆ ಶಿವ ಸ್ವರೂಪಿ. ಶಿವ ಸ್ವರೂಪಿಯಾದ ನಿಮ್ಮ ಕೊರಳಲ್ಲಿ ಹಾವಾಗಿ ಇರಲು ನನಗೆ ಖುಷಿ ಇದೆ. ಆದರೆ ಇವರ ಮತ್ತು ಇಂತಹ ಮಾತುಗಳಿಂದ ದೂರವಿಡಲು ಮೇ 10ರಂದು ನಮಗೆ ಮತ ಹಾಕಿ ಆಶಿರ್ವಾದ ಮಾಡಿ ಎನ್ನುವ ಮೂಲಕ ಖರ್ಗೆ ವಿಷ ಸರ್ಪ ಹೇಳಿಕೆಗೆ ಮೋದಿ ತಿರುಗೇಟು ನೀಡಿದ್ದಾರೆ.