ಅಸಮರ್ಪಕ ನೀರು ಪೂರೈಕೆ: ಎಲ್ ಆಂಡ್ ಟಿ ಕಂಪನಿಗೆ ಕೋಟಿ ರೂ. ದಂಡ

ನೀರು
Advertisement


ಧಾರವಾಡ: ಹು-ಧಾ ಅವಳಿ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆ ಮಾಡದೇ ಕರ್ತವ್ಯ ಲೋಪ ಎಸಗಿದ್ದಲ್ಲದೇ ಪಾಲಿಕೆಗೆ ಆರ್ಥಿಕ ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಎಲ್ ಆಂಡ್ ಟಿ ಕಂಪೆನಿಗೆ ಒಂದು ಕೋಟಿ ದಂಡ ವಿಧಿಸಲಾಯಿತು.
ಇಲ್ಲಿಯ ಪಾಲಿಕೆ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಹಾಪೌರ ಈರೇಶ ಅಂಚಟಗೇರಿ ಅವರು ಅಸಮರ್ಪಕ ನೀರು ಪೂರೈಕೆ ಕುರಿತಂತೆ ಸರ್ವ ಸದಸ್ಯರ ಅಹವಾಲು ಹಾಗೂ ದೂರುಗಳ ಕುರಿತ ಚರ್ಚೆಯ ನಂತರ ಈ ನಿರ್ಣಯ ಕೈಗೊಂಡರು.
ಪಾಲಿಕೆ ವ್ಯಾಪ್ತಿಯಲ್ಲಿ ನೀರು ಸರಬರಾಜು, ಕೊಳವೆ ಬಾವಿಗಳ ದುರಸ್ತಿ, ಗುತ್ತಿಗೆದಾರರ ಬಾಕಿ ಸೇರಿದಂತೆ ನೀರು ಪೂರೈಕೆಗೆ ಸಂಬAಧಿಸಿದAತೆ ಯಾವುದೇ ಪಾವತಿ ೧೫ ದಿನ ಮೀರಿದಲ್ಲಿ ಹೆಚ್ಚುವರಿ ದಂಡ ವಿಧಿಸಲಾಗುವುದು. ಇದೇ ತಪ್ಪು ಪುನಃ ಘಟಿಸಿದರೆ ಎಲ್ ಆಂಡ್ ಟಿ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರಣ ಕೇಳಿ ನೋಟಿಸ್…
ಸರ್ವ ಸದಸ್ಯರು ಕಳೆದ ೧೦ ತಿಂಗಳಿAದ ನೀರಿನ ಸಮಸ್ಯೆ ಕುರಿತು ದೂರುಗಳನ್ನು ನೀಡುತ್ತಲೇ ಬಂದಿದ್ದು, ಅವುಗಳಿಗೆ ಪರಿಹಾರ ಒದಗಿಸುವಂತೆ ಮಹಾಪೌರರು ಆದೇಶಿಸಿದರೂ ಅದನ್ನು ಪಾಲಿಸದೇ ಕರ್ತವ್ಯದಲ್ಲಿ ನಿರ್ಲಕ್ಷö್ಯ ತೋರಿದ ಹಿನ್ನೆಲೆಯಲ್ಲಿ ಎಲ್ ಆಂಡ್ ಟಿ ಕಂಪೆನಿಗೆ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿ ಇರುವ ಎಲ್ ಆಂಡ್ ಟಿ ಕಂಪೆನಿಯ ಅಧಿಕಾರಿಗಳು ಪಾಲಿಕೆ ಸದಸ್ಯರ ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಯಾಕೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಕೇಳಿದ್ದಲ್ಲದೇ ನೋಟಿಸ್ ತಲುಪಿದ ೨೪ ಗಂಟೆಯಲ್ಲಿ ಖುದ್ದಾಗಿ ಅಥವಾ ಲಿಖಿತವಾಗಿ ಉತ್ತರ ನೀಡುವಂತೆ ತಿಳಿಸಿದ್ದಾರೆ.