ಅವಳಿ ಮಕ್ಕಳನ್ನು ಕೊಂದ ತಂದೆ

ಕೊಲೆ
Advertisement

ದಾವಣಗೆರೆ: ನಾಲ್ಕು ವರ್ಷ ನಾಲ್ಕು ತಿಂಗಳ ಅವಳಿ ಮಕ್ಕಳನ್ನು ಕೊಂದ ತಂದೆ ಈಗ ಪೊಲೀಸರ ಅತಿಥಿಯಾಗಿದ್ದಾನೆ. ರಾಣೇಬೆನ್ನೂರಿನ ಬಳಿಯ ಚಳಗೇರಿ ಟೋಲ್‌ನಲ್ಲಿ ಈ ಘಟನೆ ನಡೆದಿದೆ.
ನಗರದ ಆಂಜನೇಯ ಬಡಾವಣೆಯ ನಿವಾಸಿ ಅಮರ್(36) ಅವಳಿ ಮಕ್ಕಳನ್ನು ಕೊಂದ ತಂದೆ. ಅದ್ವೆತ್, ಅನ್ವಿತ್ ಅವಳಿ ಸಾವು ಕಂಡಿರುವ ಮಕ್ಕಳು.
ಅಮರ್ ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್‌ನವನಾಗಿದ್ದಾನೆ. ಹರಿಹರದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದಾನೆ. ಈತ ವಿಜಯಪುರದ ವಿಜಯಲಕ್ಷ್ಮೀ ಅವರೊಂದಿಗೆ ವಿವಾಹವಾಗಿದ್ದು ಅವರಿಗೆ ಅದ್ವೆತ್ ಮತ್ತು ಅನ್ವಿತ್ ಇಬ್ಬರು ಅವಳಿ ಮಕ್ಕಳಿದ್ದರು.
ಕೆಲವು ದಿನಗಳ ಹಿಂದೆ ವಿಜಯಲಕ್ಷ್ಮೀ ವಿಜಯಪುರಕ್ಕೆ ಪತಿ ಮತ್ತು ಮಕ್ಕಳನ್ನು ಬಿಟ್ಟು ಹೋಗಿದ್ದರು. ಈ ಮಕ್ಕಳು ಅಮರ್‌ನ ತಾಯಿಯೊಂದಿಗೆ ಇದ್ದರು. ಬುಧವಾರ ರಾತ್ರಿ ಅಮರ್ ತನ್ನ ಕಾರಿನಲ್ಲಿ ಅವಳಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮಕ್ಕಳ ಬಾಯಿ ಮತ್ತು ಮುಗಿಗೆ ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ವಿಜಯಲಕ್ಷ್ಮೀ ಅವರು ಪತಿ ಅಮರ್ ವಿರುದ್ಧ ದೂರು ನೀಡಿದ ಸಂಬಂಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಮರ್‌ನನ್ನು ಬಂಧಿಸಿದ್ದಾರೆ.