ಅಯೋಧ್ಯೆಯಿಂದ ಅಂಜನಾದ್ರಿಗೆ ರೈಲು

Advertisement

ಗಂಗಾವತಿ: ಅಯೋಧ್ಯೆಯಿಂದ ಕಿಷ್ಕಿಂಧೆಯ ನಾಡು ಅಂಜನಾದ್ರಿಗೆ ಶೀಘ್ರ ರ‍್ವೆಲ್ವೆ ಸಂಪರ್ಕ ಕಲ್ಪಿಸುವ ಯೋಜನೆ ಸಿದ್ಧವಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಭತ್ತದ ನಾಡು ಗಂಗಾವತಿಯ ಎಪಿಎಂಸಿ ತಾಲೂಕು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಯೋಧ್ಯೆಯಂತೆ ಕಿಷ್ಕಿಂಧೆಯ ನಾಡನ್ನು ಅಭಿವೃದ್ಧಿ ಪಡಿಸಲು ಪ್ರಧಾನಿ ನೀಲನಕ್ಷೆ ತಯಾರಿಸಿದ್ದಾರೆ. ಡಬಲ್ ಇಂಜಿನ್ ಸರ್ಕಾರಕ್ಕೆ ಆಶೀರ್ವದಿಸಿ ಬೆಂಗಳೂರು ಐಟಿ ಹಬ್ಬ ಆಗಿಸಲು ಎಲ್ಲರೂ ಸಹಕರಿಸೋಣ ಎಂದರು.
ಉತ್ತರದ ಶ್ರೀರಾಮನ ನಾಡು ಅಯೋಧ್ಯೆ ಹಾಗೂ ದಕ್ಷಿಣದ ಕಿಷ್ಕಿಂಧೆಯ ಹನುಮನ ನಾಡು ಅಂಜನಾದ್ರಿಗೆ ಮೊದಲಿನಿಂದಲೂ ಅವಿನಾಭಾವ ಸಂಬಂಧ ಇದೆ. ಮರ್ಯಾದೆ ಪುರುಷೋತ್ತಮ ಶ್ರೀರಾಮ ಪ್ರಭು ಹಾಗೂ ಸುಗ್ರಿವರಿಗೆ ಸಂಪರ್ಕ ಸೇತುವೆ ಕಲ್ಪಿಸಿದ್ದು ಕಿಷ್ಕಿಂಧಾಪತಿ ಹನುಮ(ಆಂಜನೇಯ) ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಬರುವ ೨೦೨೪ರಲ್ಲಿ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಪ್ರಭುವಿನ ಭವ್ಯ ಮಂದಿರಕ್ಕೆ ಆಹ್ವಾನಿಸಲು ಕಿಷ್ಕಿಂಧೆಯ ರಾಮನ ಬಂಟ ಹನುಮನ ನಾಡಿಗೆ ಬಂದಿದ್ದೇವೆ ಎಂದು ಯೋಗಿ ಹೇಳಿದರು.