ಅಯೋಧ್ಯೆ: ಸದ್ಗುರು ಜಗ್ಗಿ ವಾಸುದೇವ್ ಅವರು ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರಲ್ಲಿ ರಾಮ ನಾಮ ಜಪ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿರುವ ಅವರು, 500 ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಭಾರತೀಯ ನಾಗರಿಕತೆಯ ಇತಿಹಾಸದಲ್ಲಿ ಇದೊಂದು ಮಹತ್ವದ ಕಾಲಘಟ್ಟವಾಗಿದೆ ಎಂದರು. ಇದು ಯಾವುದೇ ನಿರ್ದಿಷ್ಟ ಧರ್ಮದ ವಿರುದ್ಧ ಅಲ್ಲ. ಇದು ನಾಗರಿಕತೆಯ ಅಂಶವಾಗಿದೆ, ರಾಮ ಭೂತಕಾಲದ ವ್ಯಕ್ತಿ ಆದರೂ ಭವಿಷ್ಯಕ್ಕೆ ಸ್ಫೂರ್ತಿ ಎಂದಿದ್ದಾರೆ.