ಅಭ್ಯಾಸ ಬಲದ ಆಭಾಸ

ಸಾಕ್ಷಿ
Advertisement

ರಶಿಯಾದ ಶರೀರ ವಿಜ್ಞಾನಿ ಇವಾನ್ ಪಾವ್‌ಲೋವ್‌ಗೆ ೧೯೦೪ರ ನೋಬೆಲ್ ಪಾರಿತೋಷಿಕ ದೊರೆತಿತ್ತು. ಆತನ ಸಂಶೋಧನೆ ಬಹುದೊಡ್ಡ ಚಿಂತನೆಗೆ ನಾಂದಿ ಹಾಡಿತ್ತು. ಮನುಷ್ಯನ ಮನಸ್ಸು ಹೇಗೆ ಬೇಗನೆ ಕಟ್ಟುಪಾಡಿಗೆ ಹೊಂದಿಕೊಂಡು ಅಭ್ಯಾಸ ಮಾಡಿಕೊಂಡುಬಿಡುತ್ತದೆ ಎಂಬುದು ಆತನ ಸಂಶೋಧನೆ.
ಆತ ಕೆಲವು ಸಾಕುನಾಯಿಗಳ ಮೇಲೆ ಪ್ರಯೋಗ ಮಾಡುತ್ತಿ. ನಾಯಿಗಳಿಗೆ ಆಹಾರ ಹಾಕುವ ಸಮಯದಲ್ಲಿ, ಆಹಾರ ತರುವುದಕ್ಕಿಂತ ಮೊದಲೇ, ಆಹಾರದ ವಾಸನೆ ಬಂದಾಗ ಅವುಗಳ ಬಾಯಿಯಲ್ಲಿ ನೀರೂರಿ ಜೊಲ್ಲು ಸುರಿಯುತ್ತಿತ್ತು. ಆಹಾರ ಈಗ ಬಂದೀತು ಎಂಬ ನಿರೀಕ್ಷೆಯೇ ಅವುಗಳ ಬಾಯಲ್ಲಿ ನೀರು ಬರಿಸುತ್ತಿತ್ತು. ಆಗ ಪಾವ್‌ಲೋವ್ ನಾಯಿಗಳನ್ನು ಒಂದು ಗೂಡಿನಲ್ಲಿಟ್ಟು ಬಾಗಿಲು ಹಾಕಿಬಿಟ್ಟ. ಆಹಾರ ಕೊಡುವ ಸಮಯ ಬಂದಾಗ, ಬಾಗಿಲು ತೆರೆದೊಡನೆ ನಾಯಿಗಳು ಜೊಲ್ಲು ಸುರಿಸುತ್ತಿವು. ಬಾಗಿಲು ತೆರೆಯುವ ಕ್ರಿಯೆ ಬಂದು ತಟಸ್ಥವಾದ, ಯಾವ ಪ್ರಚೋದನೆಯನ್ನು ಮಾಡದ, ಸೂಚನೆ. ಆದರೆ ನಾಯಿಗಳು, ಬಾಗಿಲು ತೆರೆಯುವುದಕ್ಕೂ, ಆಹಾರ ಸರಬರಾಜಿಗೂ ಸಂಬಂಧ ಕಲ್ಪಿಸಿಕೊಂಡು ಅಭ್ಯಾಸಮಾಡಿಕೊಂಡಿವು. ಮುಂದೆ ಆತ ಬಾಗಿಲು ತೆರೆದು, ಆಹಾರವನ್ನು ಕೊಡದೆ ಕೆಲದಿನ ಅವುಗಳನ್ನು ಗಮನಿಸಿದ. ನಿಧಾನವಾಗಿ ಕೆಲದಿನಗಳ ಮೇಲೆ ಆಹಾರ ಬಾರದಿದ್ದಾಗ, ಬಾಗಿಲು ತೆರೆದಾಗ ಜೊಲ್ಲು ಒಸರುವುದು ಕಡಿಮೆಯಾಯಿತು. ಹಾಗೆಂದರೆ, ಬಾಗಿಲು ತೆರೆದರೂ ಆಹಾರ ಬರುವುದು ಖಚಿತವಲ್ಲ ಎಂಬುದು ಅವುಗಳಿಗೆ ಅಭ್ಯಾಸವಾಗತೊಡಿಗತ್ತು. ಪಾವ್‌ಲೋವ್ ಮತ್ತೊಂದು ಪ್ರಯೋಗ ಮಾಡಿದ. ನಾಯಿಗಳಿಗೆ ಆಹಾರ ಹಾಕುವುದಕ್ಕಿಂತ ಮೊದಲು ಒಂದು ಗಂಟೆಯನ್ನು ಬಾರಿಸುತ್ತಿ. ನಾಲ್ಕಾರು ದಿನಗಳಲ್ಲಿ ನಾಯಿಗಳಿಗೆ ಅದು ಅಭ್ಯಾಸವಾಯಿತು. ಗಂಟೆಯಾದ ಮೇಲೆ ಆಹಾರ ಬರುತ್ತದೆಂದು ಖಚಿತವಾಗಿತ್ತು. ಆಮೇಲೆ ಗಂಟೆ ಬಾರಿಸಿದೊಡನೆ ನಿರೀಕ್ಷೆಯ ಜೊಲ್ಲು ಸುರಿಯತೊಡಗಿತು. ಗಂಟೆ ಬಾರಿಸುವುದು ಒಂದು ತಟಸ್ಥವಾದ, ಆಹಾರಕ್ಕೆ ಸಂಬಂಧಪಡದ ಕ್ರಿಯೆ. ಆದರೆ ನಾಯಿಗಳಿಗೆ ಗಂಟೆಯ ಸದ್ದು ಆಹಾರದ ಆಗಮನದ ಸಂಕೇತವಾಗಿತ್ತು.
ಪಾವ್‌ಲೋವ್‌ನ ಪ್ರಯೋಗ ಬಹಳ ಪ್ರಸಿದ್ಧವಾಯಿತು. ಮಾನವರ ಮನಸ್ಸು ಕೂಡ, ಎಷ್ಟು ಬೇಗ ಅಭ್ಯಾಸಕ್ಕೆ ಸಿಲುಕಿಕೊಂಡುಬಿಡುತ್ತದೆ ಎಂಬ ಸಂಶೋಧನೆಗೆ ಕಾರಣವಾಯಿತು. ನಾನು ಈ ಘಟನೆಯನ್ನು ನನ್ನ ಸ್ನೇಹಿತರೊಬ್ಬರಿಗೆ ವಿವರಿಸಿದ್ದೆ. ಅದು ಅವರಲ್ಲಿ ತುಂಬ ಕುತೂಹಲವನ್ನು ಹುಟ್ಟಿಸಿತ್ತು. ಆಗ ಅವರೇನೂ ಮಾತನಾಡಲಿಲ್ಲ. ಆದರೆ ಒಂದು ವರ್ಷವಾದ ಮೇಲೆ ನನಗೊಂದು ಫೋನ್ ಬಂತು. ಮಾಡಿದವರು ಅದೇ ಸ್ನೇಹಿತರು. ಸರ್, ನೀವು ನಮ್ಮ ತೋಟಕ್ಕೆ ಬರಬೇಕು. ತಮಗೊಂದು ವಿಶೇಷವನ್ನು ತೋರಿಸಬೇಕಿದೆ ಎಂದರು. ಬರೀ ಹೇಳುವುದಷ್ಟೇ ಅಲ್ಲ, ದುಂಬಾಲು ಬಿರು. ಒತ್ತಡಕ್ಕೆ ಮಣಿದು ಒಂದು ಭಾನುವಾರ ಅವರ ತೋಟಕ್ಕೆ ಹೋದೆ. ಮಧ್ಯಾಹ್ನ ಊಟವಾದ ಮೇಲೆ ಸ್ವಲ್ಪ ಹೊತ್ತು ಇದ್ದು, ಸಾರ್ ಹೊರಗೆ ಬನ್ನಿ, ನಿಮಗೊಂದು ತಮಾಷೆ ತೋರಿಸುತ್ತೇನೆ ಎಂದರು. ಕುತೂಹಲದಿಂದ ಅವರೊಡನೆ ಹೊರಗೆ ಅಂಗಳಕ್ಕೆ ಬಂದೆ. ಮನೆಯ ಮುಂದೆ ಒಂದು ದೊಡ್ಡ ಹಿತ್ತಾಳೆಯ ಗಂಟೆ ಕಟ್ಟಿದ್ದಾರೆ. ದೇವಸ್ಥಾನಗಳಲ್ಲಿ ಇರುತ್ತವಲ್ಲ, ಅಂಥ ದೊಡ್ಡ ಗಂಟೆ ಅದು. ಯಜಮಾನರು ಜೋರಾಗಿ ಹಗ್ಗ ಎಳೆದು ಎರಡುಬಾರಿ ಗಂಟೆ ಬಾರಿಸಿದರು. ಆಶ್ಚರ್ಯ! ಮರುಕ್ಷಣದಲ್ಲಿ ನೂರಾರು ಗಿಳಿಗಳು ಒಂದೇ ಗುಂಪಿನಲ್ಲಿ ಭರ‍್ರೆಂದು ಹಾರಿ ಬಂದು, ಮುಂದೆ ನೆಲದ ಮೇಲೆ ಕುಳಿತವು. ನೆಲದ ಮೇಲೆ ಏನೂ ಇಲ್ಲ. ಗಿಳಿಗಳು ಏನನ್ನೋ ಹುಡುಕುವಂತೆ ಕಂಡಿತು. ಐದು ನಿಮಿಷದ ನಂತರ ಯಜಮಾನರು ಮತ್ತೊಂದು ಗಂಟೆ ಬಾರಿಸಿದರು. ಪರಮಾಶ್ಚರ್ಯ! ಈಗ ಗಿಳಿಗಳು ಕವಾಯಿತು ಮಾಡುವ ಸೈನಿಕರಂತೆ, ಒಟ್ಟಾಗಿ ಭರ‍್ರೆಂದು ಹಾರಿಹೋದವು. ಆಗುತ್ತಿ ಆಶ್ಚರ್ಯವನ್ನು ತಡೆಯಲಾರದೆ ಕೇಳಿದೆ, ಏನಿದು ಸ್ವಾಮಿ, ಪವಾಡ? ಗಿಳಿಗಳು ಈ ರೀತಿ ಶಿಸ್ತಿನಿಂದ ಗಂಟೆಯಾದ ಕೂಡಲೇ ಬಂದು ಗಂಟೆಯಾದ ತಕ್ಷಣ ಹಾರಿಹೋಗುತ್ತವೆ?. ಅವರು ನಕ್ಕು ನುಡಿದರು. ನೀವು ಅಂದು ಪಾವ್‌ಲೋವ್ ಪ್ರಯೋಗವನ್ನು ಹೇಳಿದ್ದಿರಲ್ಲ, ಅದನ್ನು ಬಳಸಿ ನಾನು ಮಾಡಿದ ಪ್ರಯೋಗವಿದು. ಹೌದೇ? ಏನು ಪ್ರಯೋಗವಿದು? ಎಂದು ಕೇಳಿದೆ.
ಅವರು ವಿವರಿಸಿದರು. ನಮ್ಮ ತೋಟದ ಮನೆಯ ಸುತ್ತ ಅನೇಕ ಮಾವಿನ ಮರಗಳು, ಹೊಂಗೆ ಮರಗಳಿವೆ. ಅಲ್ಲಿ ಗಿಳಿಗಳು ಬರುತ್ತವೆ. ಈ ಪಾವ್‌ಲೋವ್ ಪ್ರಯೋಗವನ್ನು ಮುಂದುವರೆಸಬೇಕೆಂದು ನಾನು ನಿತ್ಯವೂ ಅವುಗಳಿಗೆ ಕಾಳು ಮತ್ತು ಹಣ್ಣುಗಳನ್ನು ಹಾಕುತ್ತ ಬಂದೆ. ಹದಿನೈದು ದಿನಗಳಲ್ಲಿ ಗಿಳಿಗಳಿಗೆ ಅದು ತಿಳಿದು, ಅವು ಹಾರಿ ಗುಂಪುಗುಂಪಾಗಿ ಬರತೊಡಗಿದವು. ಆಗ ನಾನು ಸರಿಯಾಗಿ ಸಂಜೆ ಐದು ಗಂಟೆಗೆ ಕಾಳುಗಳನ್ನು ಹಾಕಿ ಗಂಟೆ ಬಾರಿಸಿದೆ. ಮೊದಮೊದಲು ಅವು ಗಂಟೆಗೆ ಪ್ರತಿಕ್ರಿಯೆ ತೋರಿಸುತ್ತಿರಲಿಲ್ಲ. ಆಗ ನಾನು ಐದು ಗಂಟೆಯವರೆಗೆ ನೆಲವನ್ನು ಗುಡಿಸಿ ಒಂದು ಕಾಳೂ ಇರದಂತೆ ನೋಡಿಕೊಂಡು ಸರಿಯಾಗಿ ಐದು ಗಂಟೆಗೆ ಕಾಳು ಹಾಕಿ ಗಂಟೆ ಬಾರಿಸತೊಡಗಿದೆ. ನಂತರ ಐದೂವರೆಗೆ ಮತ್ತೊಮ್ಮೆ ಗಂಟೆ ಬಾರಿಸಿ ನೆಲವನ್ನು ಗುಡಿಸಿ ಎಲ್ಲ ಕಾಳುಗಳನ್ನು ತೆಗೆದುಬಿಡುತ್ತಿದ್ದೆ. ಈಗ ಗಿಳಿಗಳಿಗೆ ಸ್ಪಷ್ಟವಾದಂತೆ ಕಂಡಿತು. ಅವು ಗಡಿಯಾರವನ್ನು ನೋಡುವುವಲ್ಲ. ಮೊದಲನೆಯ ಗಂಟೆಯಾದ ಮೇಲೆ ಆಹಾರ ಬರುತ್ತದೆ ಆದರೆ ಎರಡನೆಯ ಗಂಟೆಯಾದ ಮೇಲೆ ಕಾಳು ದೊರೆಯುವುದಿಲ್ಲ. ಹೀಗೆಯೇ ನಾಲ್ಕು ತಿಂಗಳು ತಪ್ಪದೆ ಮಾಡುತ್ತ ಬಂದೆ. ಅವುಗಳಿಗೆ ಈಗ ಗಂಟೆಯ ಶಬ್ದ ಎಷ್ಟು ಅಭ್ಯಾಸವಾಗಿ ಹೋಗಿದೆಯೆಂದರೆ ಮೊದಲನೆಯ ಗಂಟೆಯಾದ ಮೇಲೆ ನೂರಾರು ಗಿಳಿಗಳು ಹಾರಿ ಬಂದು ಕೂಡುತ್ತವೆ. ಅಲ್ಲಿ ಕಾಳುಗಳು ಇರದಿರೂ ಕುಳಿತೇ ಇರುತ್ತವೆ ಮತ್ತು ಎರಡನೆಯ ಗಂಟೆಯಾದ ಮೇಲೆ ಕಾಳು ಅಲ್ಲಿರೂ ತಿನ್ನದೆ ಹಾರಿ ಹೋಗುತ್ತವೆ.
ನಾನು ಬೆರಗಾಗಿ ಹೋದೆ. ಗಿಳಿಗಳ ಮನಸ್ಸು ಒಂದು ಅಭ್ಯಾಸಕ್ಕೆ ಒಗ್ಗಿಕೊಂಡಿತ್ತು. ನಿಜವಾಗಿ ನೋಡಿದರೆ, ಗಂಟೆಗೂ, ಕಾಳಿಗೂ ಯಾವ ಸಂಬಂಧವೂ ಇಲ್ಲ. ಆದರೆ ಒಂದು ಕಾರ್ಯ ಸತತವಾಗಿ ನಡೆದರೆ ಅದಕ್ಕೆ ಮನಸ್ಸು ಸಂಬಂಧಗಳನ್ನು ಕಲ್ಪಿಸಿಕೊಳ್ಳುತ್ತದೆ. ಇದೊಂದು ತಟಸ್ಥ ಪ್ರಚೋದನೆಗೆ ದೊರಕಿದ ಪ್ರತಿಕ್ರಿಯೆ.
ಇದು ಮನುಷ್ಯನ ಮನಸ್ಸು ಅಭ್ಯಾಸದ ಬಲೆಯೊಳಗೆ ಸಿಲುಕಿಕೊಳ್ಳುವ ಬಗೆಯೂ ಹೌದು. ಒಮ್ಮೆ ಅಥವಾ ಅನೇಕ ಬಾರಿ ಆದ ಘಟನೆ ಮನಸ್ಸನ್ನು ಒಂದು ವಿಧಿಗೆ, ವ್ಯವಸ್ಥೆಗೆ ಕಟ್ಟಿಹಾಕಿ ಬಿಡುತ್ತದೆ. ನನಗೇ ಹಾಗೆ ಆದನ್ನು ಹೇಳಬೇಕು. ನಾನು ಏಳೆಂಟು ವರ್ಷದ ಬಾಲಕನಾಗಿದ್ದಾಗ ಬಾಗಿಲುಕೋಟೆಯಲ್ಲಿದ್ದೆವು. ಆಗ ವಿದ್ಯುತ್ ದೀಪಗಳು ಇನ್ನೂ ಬಂದಿರಲಿಲ್ಲ. ಮನೆಯ ಪ್ರತಿಯೊಂದು ಕೋಣೆಯಲ್ಲಿ ಒಂದು ಸೀಮೆ ಎಣ್ಣೆ ತುಂಬಿದ ಕಂದೀಲು ಇರುತ್ತಿತ್ತು. ಮರುದಿನ ಹೋಳೀ ಹುಣ್ಣಿಮೆ. ನಮಗೆಲ್ಲ ಬಣ್ಣ ಆಡುವ ಉಮೇದು. ಆಗೆಲ್ಲ ತಗಡಿನ, ಪ್ಲಾಸ್ಟಿಕ್‌ನ ಪಿಚಕಾರಿಗಳು ಇರಲಿಲ್ಲ. ಬಿದಿರಿನ ಬೊಂಬನ್ನು ಕತ್ತರಿಸಿ ಇಟ್ಟಿರುತ್ತಿರು. ಕೆಳಭಾಗದಲ್ಲಿ ಒಂದು ತೂತು ಇರುತ್ತಿತ್ತು. ಮತ್ತೊಂದು ಬಿದಿರು ಕಡ್ಡಿಗೆ ಬಟ್ಟೆಯನ್ನು ಬಿಗಿಯಾಗಿ ಸುತ್ತಿ, ಬೊಂಬಿನೊಳಗೆ ಬಿಗಿಯಾಗಿ ಹೋಗುವಂತೆ ಕಟ್ಟಿ ಅದನ್ನೇ ಪಿಸ್ಟನ್‌ನ್ನಾಗಿ ಮಾಡಿಕೊಳ್ಳುತ್ತಿದ್ದೆವು. ಬೊಂಬನ್ನು ಬಣ್ಣದಲ್ಲಿ ಮುಳುಗಿಸಿ, ಬಿದಿರು ಕಡ್ಡಿಯನ್ನು ಹಿಂದಕ್ಕೆ ಎಳೆದಾಗ ಬಣ್ಣ ಬೊಂಬಿನಲ್ಲಿ ತುಂಬಿಕೊಳ್ಳುವುದು. ನಂತರ ಕಡ್ಡಿಯನ್ನು ಮುಂದೆ ತಳ್ಳಿ ಬಣ್ಣವನ್ನು ಹಾರಿಸುತ್ತಿದ್ದೆವು. ಹೀಗೆ ಪಿಚಕಾರಿಯನ್ನು ಸಿದ್ಧಪಡಿಸುವುದೇ ನಮಗೊಂದು ಸೊಗಸಾದ ವಿಜ್ಞಾನದ ಪ್ರಯೋಗವಾಗಿತ್ತು. ರಾತ್ರಿ ಊಟವಾದ ಮೇಲೆ ನಾನು ಹೊರಗೆ ಮೊಗಸಾಲೆಯಲ್ಲಿ ಪಿಚಕಾರಿಯನ್ನು ಸಿದ್ಧಮಾಡುತ್ತ ಕುಳಿತಿದ್ದೆ. ಅಡುಗೆ ಮನೆಯಲ್ಲಿ ನನ್ನ ಅಜ್ಜಿ, ತಾಯಿ, ಅಕ್ಕನ ಊಟ ನಡೆದಿತ್ತು. ಆಗ ಮೂರು-ನಾಲ್ಕು ಬೆಕ್ಕುಗಳು ತಮ್ಮತಮ್ಮಲ್ಲೇ ಕಾದಾಡುತ್ತ, ವಿಕಾರವಾಗಿ ಕಿರಿಚುತ್ತ ಅಡುಗೆ ಮನೆಗೆ ನುಗ್ಗಿದವು. ನಮ್ಮ ಅಜ್ಜಿ, ಅಮ್ಮ ಗಾಬರಿಯಾಗಿ ಹುಶಾ, ಹುಶಾ ಎಂದಾಗ ಅವುಗಳಿಗೂ ಗಾಬರಿಯಾಗಿ, ಅಲ್ಲಿ ಕಂದೀಲಿಗೆ ಹಾಯ್ದವು. ಅದು ಬಿದ್ದು ನಂದಿಹೋಯಿತು. ಅಮ್ಮ, ರಾಜಾ, ಹೊರಗಿನ ಕಂದೀಲು ತೊಗೊಂಡು ಬಾ. ನಮ್ಮ ಊಟಾ ಅರ್ಧಾ ಆಗ್ಯದ ಎಂದಳು. ನಾನು ನನ್ನ ಮುಂದಿ ಕಂದೀಲನ್ನು ತೆಗೆದುಕೊಂಡು ಹೋಗಬೇಕೆಂದು ಎದ್ದಾಗ, ಜಗಳಮಾಡುತ್ತಿ ಬೆಕ್ಕುಗಳು ಇಲ್ಲಿಗೂ ಬಂದು ಈ ಕಂದೀಲಿಗೆ ಡಿಕ್ಕಿ ಹೊಡೆದು ಬೀಳಿಸಿದವು. ದೀಪ ಆರಿ ಹೋಯಿತು. ಕಾದಾಡುವ ಬೆಕ್ಕುಗಳು ಮತ್ತೊಂದು ಬೆಕ್ಕಿಗೆ ಹೊಡೆಯುತ್ತಿದ್ದಾನೆಂದುಕೊಂಡೋ ಏನೋ ನನ್ನ ಬಲಕಾಲಿಗೆ ಹೊಡೆದವು, ಕಚ್ಚಿದವು. ಬೆಕ್ಕುಗಳ ಕಾಲುಗುರುಗಳು ಮತ್ತು ಹಲ್ಲುಗಳು ರೇಜರ್ ಬ್ಲೇಡಿಗಿಂತ ಹರಿತ ಎಂದು ಕೇಳಿದ್ದೆ. ಈಗ ಅದು ಅನುಭವಕ್ಕೆ ಬಂತು. ಜೋರಾಗಿ ಕಿರಿಚಿಕೊಂಡೆ. ಅಡುಗೆ ಮನೆಯಿಂದ ಎಲ್ಲರೂ ಓಡಿಬಂದು ದೀಪ ಹಚ್ಚಿದರು. ಬೆಕ್ಕುಗಳು ಓಡಿ ಹೋದವು. ಒಂದು ಕ್ಷಣದಲ್ಲಿ ನನ್ನ ಬಲಗಾಲು ಮೊಣಕಾಲಿನಿಂದ ಕೆಳಗೆ ರಕ್ತಮಯವಾಗಿತ್ತು. ಚರ್ಮ ಹರಿದುಹೋಗಿತ್ತು.
ಇದು ನನಗೆ ಆದದ್ದು ಒಮ್ಮೆ ಮಾತ್ರ. ಆದರೆ ನನಗೆ ಇಂದಿಗೂ ಬೆಕ್ಕುಗಳನ್ನು ಕಂಡರೆ ಆಗುವುದಿಲ್ಲ. ಅವುಗಳನ್ನು ಎಂದಿಗೂ ಹತ್ತಿರ ಬರಗೊಡುವುದಿಲ್ಲ. ಈಗ ನಾನು ಕಾಣುವುದು ಬಾಗಿಲುಕೋಟೆಯ ಅಂದಿನ ಬೆಕ್ಕುಗಳಲ್ಲ ಎಂಬುದು ಗೊತ್ತಿದ್ದರೂ, ಅಂದಿನ ಘಟನೆಯನ್ನು ಪುನಃ ಪುನಃ ನೆನೆಸಿಕೊಂಡು, ಅಭ್ಯಾಸಬಲದಿಂದ ಬೆಕ್ಕುಗಳೆಂದರೆ ನನಗೆ ಅಲರ್ಜಿ, ಅಸಹ್ಯ ಮತ್ತು ಕೋಪ. ಇದೇ ಮನಸ್ಸು ವ್ಯವಸ್ಥೀಕರಣಗೊಳ್ಳುವುದು. ಆ ಭಾವನೆ ಬಲಿತಂತೆ, ಅಭ್ಯಾಸವೇ ಆಗಿ ಹೋಗುತ್ತದೆ, ಮನಸ್ಸಿನ ಸೃಜನಶೀಲತೆಗೊಂದು ತಡೆಯನ್ನು ಒಡ್ಡುತ್ತದೆ.