ಅಭಿಮಾನಿಯಿಂದ ಬಯ್ಯಾಪುರ ಗೆಲುವಿಗೆ ಹರಕೆ

Advertisement

ಕುಷ್ಟಗಿ: ತಮ್ಮ ನೆಚ್ಚಿನ ರಾಜಕಾರಣಿಗಳ ಗೆಲುವಿಗಾಗಿ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ದೇವರಿಗೆ ಹರಕೆ ಹೊರುವುದು, ವಿವಿಧ ಧಾರ್ಮಿಕ ಕಾರ್ಯ ನೆರವೇರಿಸುತ್ತಾರೆ.
ತಾಲೂಕಿನ ವಣಗೇರಾ ಗ್ರಾಮದ ಶ್ರೀ ಕಲ್ಯಾಣ ಬಸವೇಶ್ವರ ಜಾತ್ರೆಯಲ್ಲಿ ಅಭಿಮಾನಿಯೊಬ್ಬರು ಜನನಾಯಕ ಅಮರೇಗೌಡ ಪಾಟೀಲ ಬಯ್ಯಾಪುರ 2023ಕ್ಕೆ ಮತ್ತೊಮ್ಮೆ ಕುಷ್ಟಗಿ ವಿಧಾನಸಭೆ ಕ್ಷೇತ್ರದಲ್ಲಿ ಮುಂದಿನ ಶಾಸಕರು ಎಂದು ಬಾಳೆಹಣ್ಣಿನ ಮೇಲೆ ಬರೆದು ರಥೋತ್ಸವಕ್ಕೆ ಅರ್ಪಿಸಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.