ಉತ್ತರ ಕನ್ನಡ: ಅಬಕಾರಿ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ್ದು, ಈ ಬಗ್ಗೆ ವಿವರಗಳನ್ನು ನೀಡಲಿ. ಯಾವುದೇ ತನಿಖೆಗೆ ನಾವು ಸಿದ್ದ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಿದ್ಧಾಪುರ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ವಿತರಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಅಬಕಾರಿ ಟೆಂಡರ್ ನಲ್ಲಿ ಹಗರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿರುವ ಬಗ್ಗೆ ವಿವರ ಪ್ರತಿಕ್ರಿಯೆ ನೀಡಿ ವಿವರಗಳನ್ನು ನೀಡಲಿ. ಯಾವುದೇ ವಿವರಗಳನ್ನು ನೀಡದೇ ಆರೋಪ ಮಾಡಿದರೆ ಪ್ರಯೋಜನವಿಲ್ಲ ಎಂದರು.
ಲೋಕಾಯುಕ್ತಕ್ಕೆ ದೂರು ನೀಡಲಿ
ಶಾಸಕ ಪ್ರಿಯಾಂಕ ಖರ್ಗೆ ಆಡಿಯೋ ಬಿಡುಗಡೆ ಮಾಡಿರುವ ಬಗ್ಗೆ ಉತ್ತರಿಸಿ ಅವರ ಬಗ್ಗೆಯೇ ಸಾಕಷ್ಟು ಆರೋಪಗಳಿವೆ ಪಿ.ಎಸ್.ಐ ಪ್ರಕರಣದಲ್ಲಿ ಅವರ ಮೇಲೆ ಆರೋಪವಿದೆ. ವಿವರಗಳನ್ನು ನೀಡಲಿ. ಈಗ ಲೋಕಾಯುಕ್ತವಿದ್ದು, ದೂರು ನೀಡಿದರೆ, ತನಿಖೆಯಾಗುತ್ತದೆ ಎಂದರು.
ವೇತನ ಪರಿಷ್ಕರಣೆ: ಇತ್ಯರ್ಥಪಡಿಸಲಾಗುವುದು
ಇಂದು ಸಂಜೆ ವೇತನ ಆಯೋಗ ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡಲಾಗುವುದು ಎಂದರು.
ಸರ್ಕಾರಿ ನೌಕರರು ನಮ್ಮವರು. ಅವರ ವೇತನ ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆಯಾಗಿದೆ. ನೌಕರರು ಮಧ್ಯಂತರ ವರದಿಯನ್ನು ಪಡೆದು ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಬೇಡಿಕೆ ಇದೆ. ಆಯೋಗದ ಸಂಪರ್ಕದಲ್ಲಿ ರಾಜ್ಯ ಸರ್ಕಾರವಿದ್ದು, ಕೂಡಲೇ ಮಧ್ಯಂತರ ವರದಿ ನೀಡಲು ಕೋರಲಾಗಿದೆ ಎಂದರು. ವಿಧಾನಸಭೆಯಲ್ಲಿಯೂ ಈ ಬಗ್ಗೆ ಸ್ಪಷ್ಟಪಡಿಸಲಾಗಿದೆ. ವೇತನ ಆಯೋಗ ರಚನೆಯಾದ ನಂತರ ಅದರ ಶಿಫಾರಸ್ಸುಗಳನ್ನು ಜಾರಿ ಮಾಡಬೇಕಾಗುತ್ತದೆ ಎಂದರು.