ಅಪಘಾತ: ವೃದ್ದೆ ಸಾವು

accident
Advertisement

ಮಂಡ್ಯ: ರಸ್ತೆ ದಾಟುತ್ತಿದ್ದ ವೃದ್ದೆಗೆ ಕಾರು ಡಿಕ್ಕಿ ಹೊಡೆದು ವೃದ್ದೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಳೇ ಬೂದನೂರು ಗ್ರಾಮದಲ್ಲಿ‌ ಜರುಗಿದೆ.
ಮುಂಜಾನೆ ಗ್ರಾಮದ ವಿಶ್ವೇಶ್ವರಯ್ಯ ನಾಲೆ ಬಳಿ‌ ಮೈಸೂರು-ಬೆಂಗಳೂರು ಹೈವೇ ದಾಟುತ್ತಿದ್ದಾಗ ಅತಿವೇಗದಲ್ಲಿ ಬಂದ ಕಾರು ವೃದ್ದೆಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ತಲೆಗೆ ತೀವ್ರ ಪಟ್ಟು ವೃದ್ದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.