ಮಂಗಳೂರು: ಇಬ್ಬರು ಅನ್ಯಕೋಮಿನ ಯುವಕರ ಜತೆ ಸುತ್ತಾಡುತ್ತಿದ್ದ ಯುವತಿ ಮುಕ್ಕದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಈ ಮೂರು ಮಂದಿಯನ್ನು ಸುರತ್ಕಲ್ ಪೊಲೀಸರ ವಶಕ್ಕೆ ಒಪ್ಪಿಸಿದ ವಿದ್ಯಮಾನ ನಡೆದಿದೆ.
ಮುಕ್ಕ ಬಳಿ ಕಾರಿನಲ್ಲಿ ಈ ಮೂವರು ಶಾಲಾ ವಾಹನದ ಚಾಲಕನ ಜತೆ ಬುಧವಾರ ಜಗಳ ಕಾಯುತ್ತಿದ್ದರು. ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕಾರು
ಮುಂದಕ್ಕೆ ಚಲಿಸದೆ ಕೆಟ್ಟು ನಿಂತಿತ್ತು. ಈ ವೇಳೆ ಸ್ಥಳದಲ್ಲಿ ಸೇರಿದ ಜನರು ಈ ಮೂವನ್ನು ಪ್ರಶ್ನಿಸಿದ್ದಾರೆ. ಆಗ ಯುವತಿ ಇನ್ನೊಂದು ಕೋಮಿನವರಾಗಿದ್ದು, ಉಳಿದವರು
ಅನ್ಯಕೋಮಿನವರು ಎಂಬುದು ಗೊತ್ತಾಗಿದೆ.
ಕಾರಿಗೆ ಪೂರ್ತಿ ಟಿಂಟ್ ಅಳವಡಿಸಿದ್ದು, ಕಾರಿನ ಹಿಂಭಾಗದಲ್ಲಿ ನಂಬರು ಪ್ಲೇಟ್ ಕೂಡ ಇರಲಿಲ್ಲ. ಈ ಅನ್ಯಕೋಮಿನ ಜೋಡಿ ಸುತ್ತಾಡುತ್ತಿದ್ದುದು ಹಲವು ಅನುಮಾನಕ್ಕೆ
ಎಡೆಮಾಡಿದ್ದು, ಸ್ಥಳೀಯರು ಸುರತ್ಕಲ್ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಶಾಲಾ ವಾಹನ ಜತೆ ಅಪಘಾತ ನಡೆಸಿದ ಕಾರಣಕ್ಕೆ ಕಾರು ಮಾಲೀಕರ ವಿರುದ್ಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾರಿನಲ್ಲಿ ಮೂವರು ವಿದ್ಯಾರ್ಥಿಗಳಿದ್ದು ಬೇರೆ ಯಾವುದೇ ಗಲಾಟೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.