ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಜಿ20 ಅಧ್ಯಕ್ಷತಾ ಅವಧಿಯ ಲಾಂಛನ, ಥೀಮ್ ಮತ್ತು ವೆಬ್ಸೈಟ್ಗಳನ್ನು ಅನಾವರಣಗೊಳಿಸಿದರು. ಇವುಗಳು ದೇಶದ ಸಂದೇಶ ಮತ್ತು ಜಗತ್ತಿಗೆ ಹೆಚ್ಚಿನ ಆದ್ಯತೆಗಳು ಏನು ಎಂಬುದನ್ನು ಬಿಂಬಿಸುತ್ತವೆ ಎಂದು ಅವರು ಇದೇ ವೇಳೆ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು, G20 ಲೋಗೋ ಮತ್ತು ಥೀಮ್ ವಿಚಾರದಲ್ಲಿ ಸಾವಿರಾರು ಜನರು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಇದು ನನಗೆ ಸಂತೋಷ ನೀಡಿದೆ ಎಂದು ಹೇಳಿದರು.
“ಜಾಗತಿಕ ವೇದಿಕೆಯಲ್ಲಿ ನಾಯಕತ್ವದ ಪಾತ್ರಗಳನ್ನು ಕೈಗೆತ್ತಿಕೊಳ್ಳುವ” ಪ್ರಧಾನ ಮಂತ್ರಿಯ ದೃಷ್ಟಿಯೊಂದಿಗೆ ದೇಶದ ವಿದೇಶಾಂಗ ನೀತಿಯ ವಿಕಾಸದ “ಮಹತ್ವದ ಹೆಜ್ಜೆ” ನಮ್ಮ ಎದುರಿಗಿದೆ. ಭಾರತವು ಮುಂದಿನ ತಿಂಗಳು G20ಯ ಅಧ್ಯಕ್ಷತೆ ವಹಿಸಿಕೊಳ್ಳಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
“ ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಆದ್ಯತಾ ವಿಷಯಗಳ ಕುರಿತು ಜಾಗತಿಕ ಕಾರ್ಯಸೂಚಿಗೆ ಕೊಡುಗೆ ನೀಡಲು ಭಾರತಕ್ಕೆ ಒಂದು ಅನನ್ಯ ಅವಕಾಶವನ್ನು ಜಿ 20 ಅಧ್ಯಕ್ಷ ಸ್ಥಾನವು ನೀಡುತ್ತದೆ. ನಮ್ಮ G20 ಪ್ರೆಸಿಡೆನ್ಸಿಯ ಲೋಗೋ, ಥೀಮ್ ಮತ್ತು ವೆಬ್ಸೈಟ್ ಭಾರತದ ಸಂದೇಶ ಮತ್ತು ಜಗತ್ತಿಗೆ ಹೆಚ್ಚಿನ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ”ಎಂದು ಸಚಿವಾಲಯ ಹೇಳಿದೆ.
G20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿ 32 ವಿವಿಧ ವಲಯಗಳ ಸುಮಾರು 200 ಸಭೆಗಳನ್ನು ಭಾರತವು ನಡೆಸಲಿದೆ.
ಲೋಗೋದ ವಿನ್ಯಾಸವು ಕಮಲ ಮತ್ತು ಭೂಮಿಯನ್ನು ಒಳಗೊಂಡಿದೆ. ಕಮಲದ ಮೇಲಿನ 7 ದಳಗಳು ಜಗತ್ತಿನ 7 ಖಂಡಗಳನ್ನು ಪ್ರತಿನಿಧಿಸುತ್ತವೆ. ಮತ್ತು ಭಾರತದ #G20 ಪ್ರೆಸಿಡೆನ್ಸಿಯ ಥೀಮ್ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’