ಬೆಂಗಳೂರು: ಅತ್ತೆಗೆ ಅಳಿಯನೇ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಕೆಂಗೇರಿ ಬಳಿಯ ನಾಗದೇವನ ಹಳ್ಳಿಯ ಬೃಂದಾವನ ಲೇಔಟ್ನಲ್ಲಿ ನಡೆದಿದೆ.
ಮೊಮ್ಮಗಳ ಶಾಲೆಯಲ್ಲಿ ಪರೀಕ್ಷೆ ಇದ್ದು ಹಿಗಾಗಿ ಮಗುವನ್ನು ಊರಿಗೆ ಕರೆದುಕೊಂಡು ಹೋಗಲು ಅಳಿಯನ ಮನೆಗೆ ಬಂದಿದ್ದ ಅತ್ತೆ ಮತ್ತು ಅಳಿಯನ ಮದ್ಯೆ ಮಾತಿಗೆ ಮಾತು ಬೆಳೆದು ಅಳಿಯ ದಿವಾಕರ್ ಚಾಕುವಿನಿಂದ್ ಅತ್ತೆಗೆ ಇರಿದಿದ್ದಾನೆ. ಏಳಲ್ ಅರಸಿ(48) ಮೃತ ದುರ್ದೈವಿ ಆಗಿದ್ದಾರೆ. ಅಳಿಯ ದಿವಾಕರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ