ಬೆಳಗಾವಿ: ನಗರದಲ್ಲಿ ಮಟಕಾ, ಜೂಜಾಟ, ಅಕ್ರಮ ಸಾರಾಯಿ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಮಾರ್ಕೇಟ್ ಉಪವಿಭಾಗದ ಮಾರ್ಕೆಟ್ ಠಾಣೆಯಲ್ಲಿ-03, ಮಾಳಮಾರುತಿ ಠಾಣೆಯಲ್ಲಿ-02 ಹಾಗೂ ಶಹಾಪೂರ ಠಾಣೆಯಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಗಡಿಪಾರು ಮಾಡಿದ್ದಾರೆ.
ಮಹಮ್ಮದರಫಿ ಮೋದಿನ ಸಾಬ ತಹಶೀಲ್ದಾರ(78), ಇಜಾರಅಹ್ಮದ ಮಹದಇಸಾಕ್ ನೇಸರಿಕರ(48, ಜಾನಿ ಜಯಪಾಲ ಲೊಂಡೆ(36), ಬೈರಗೌಡ ಜ್ಯೋತಿಬಾ ಪಾಟೀಲ(45), ನಿತೀನ ಪಾಂಡುರಂಗ ಪೇಡೇಕರ್(50) ಎಂಬುವರೇ ಗಡಿಪಾರು ಶಿಕ್ಷೆಗೆ ಒಳಗಾದವರು.