ಬೆಳಗಾವಿ: ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ಗಂಭೀರ ಸ್ವರೂಪದ ಅಪರಾಧ ಎಸಗಿ ಕಣ್ತಪ್ಪಿಸಿಕೊಂಡು ತಿರುಗುತ್ತಿದ್ದ ರೌಡಿ ವಿಶಾಲಸಿಂಗ್ ಚವ್ಹಾಣ(೨೫) ಎಂಬಾತನನ್ನು ಪೊಲೀಸರು ಹೆಡಮುರಿ ಕಟ್ಟಿದ್ದಾರೆ.
ಕರ್ನಾಟಕ-ಗೋವಾ-ಮಹಾರಾಷ್ಟ್ರ ರಾಜ್ಯಗಳಲ್ಲಿ ಈತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಒಂದು ಕೊಲೆ, ಐದು ಕೊಲೆ ಯತ್ನ, ಅಪಹರಣ, ಸುಲಿಗೆ, ಕಳ್ಳತನ, ದರೋಡೆ, ಅಕ್ರಮ ಶಸ್ತ್ರಾಸ್ತ್ರ ಬಳಕೆ ಸೇರಿ ಹಲವು ಪ್ರಕರಣಗಳಲ್ಲಿ ಮೂರು ರಾಜ್ಯಗಳ ಪೊಲೀಸರಿಗೆ ಈತ ಬೇಕಾಗಿದ್ದ ಎನ್ನಲಾಗಿದೆ. ಮೂಲತಃ ಕಿತ್ತೂರು ತಾಲೂಕು ಚಿಕ್ಕನಂದಿಹಳ್ಳಿ ಗ್ರಾಮದ ರೌಡಿ ವಿಶಾಲ ಸಿಂಗ್ ಚೌಹಾಣ ಪ್ರಸ್ತುತ ಬೆಳಗಾವಿ ನಗರದ ಶಾಸ್ತ್ರಿ ನಗರದಲ್ಲಿ ವಾಸವಾಗಿದ್ದ.