ಅಂಕಿತಾಗೆ ಕರೆ ಮಾಡಿದ ಡಿಕೆ ಶಿವಕುಮಾರ್

Advertisement

ಬೆಂಗಳೂರು: 2023-2024 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆಯ ಮುಧೋಳ ಮೂಲದ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಹಾಗೂ ಅವರ ಪೋಷಕರೊಂದಿಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕರೆ ಮಾಡಿ ಅಭಿನಂದಿಸಿದ್ದಾರೆ. ಬೆಂಗಳೂರಿಗೆ ಬಂದಾಗ ತಮ್ಮ ಮನೆಗೆ ಬರಬೇಕೆಂದು ಶಿವಕುಮಾರ್ ಅವರು ಅಂಕಿತಾ ಅವರಿಗೆ ಹೇಳಿದರು. ಅಲ್ಲದೆ ಅಂಕಿತಾ ಅವರ ತಂದೆ ಬಸಪ್ಪ ಅವರ ಜತೆಯೂ ಮಾತಾಡಿ ಮಗಳ ಸಾಧನೆಗೆ ಶುಭಾಶಯ ಹೇಳಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು SSLC ಪರೀಕ್ಷೆಯಲ್ಲಿ 625/625 ಅಂಕ ಗಳಿಸುವ ಮೂಲಕ‌ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆಯ ಮುಧೋಳ ಮೂಲದ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಹಾಗೂ ಅವರ ಪೋಷಕರೊಂದಿಗೆ ಮಾತನಾಡಿ ಆಕೆಯ ಸಾಧನೆಯನ್ನು ಪ್ರಶಂಸಿಸಿದೆ. ಸದ್ಯದಲ್ಲೇ ಆಕೆಯನ್ನು ಭೇಟಿಯಾಗಲಿದ್ದೇನೆ. ಸರ್ಕಾರಿ ಶಾಲೆಯಲ್ಲಿ ಓದಿದ ಅಂಕಿತಾ ಅವರ ಸಾಧನೆ ಬಗ್ಗೆ ರಾಜ್ಯವೇ ಹೆಮ್ಮೆಪಡುತ್ತಿದೆ ಎಂದಿದ್ದಾರೆ