ʻಮೆಡಿಕಲ್ ಕಾಲೇಜು ಮಂಜೂರಾಗದಿರಲು ಯಾರ ಪ್ರಚೋದನೆಯೋ ಗೊತ್ತಿಲ್ಲʼ

ಜಿ.ಎಂ. ಸಿದ್ದೇಶ್ವರ
Advertisement

ದಾವಣಗೆರೆ: ಸರ್ಕಾರಿ ಮೆಡಿಕಲ್‌ ಕಾಲೇಜು ಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇದ್ದು, ಅದಕ್ಕೆ ತಾವು ಸಾಕಷ್ಟು ಒತ್ತಡ ಹಾಕುತ್ತಿದ್ದೇವೆಯಾದರೂ ಯಾರ ಪ್ರಚೋದನೆ ಇದೆಯೋ ಗೊತ್ತಿಲ್ಲ, ಇಲ್ಲಿಗೆ ಮೆಡಿಕಲ್‌ ಕಾಲೇಜು ಮಂಜೂರಾಗುತ್ತಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಿನಿಂದ ಈಗಿನ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೂ ಮೆಡಿಕಲ್‌ ಕಾಲೇಜಿಗಾಗಿ ಒತ್ತಡ ಹಾಕುತ್ತಲೇ ಇದ್ದೇನೆ. ಆದರೆ, ದಾವಣಗೆರೆಗೆ ಸರ್ಕಾರಿ ಕಾಲೇಜು ಮಂಜೂರಾಗುತ್ತಿಲ್ಲ ಎಂದರು.
ಈ ಬಾರಿಯ ಬಜೆಟ್‌ನಲ್ಲಿ ಮೆಡಿಕಲ್‌ ಕಾಲೇಜು ಘೋಷಣೆ ಮಾಡಬೇಕು ಎಂದು ಮತ್ತೆ ಒತ್ತಾಯಿಸುತ್ತೇನೆ ಎಂದರು.