ಕಾಸರಗೋಡು: ಕರಿಪೂರ್ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ೨.೫೫ ಕೋಟಿ ರೂ. ಮೌಲ್ಯದ ೪.೬೫ ಕಿಲೋ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಾಪ್ಪಾಡ್ ನಿವಾಸಿಯಾದ ಇಸ್ಮಾಯಿಲ್, ಅರಿಂಬ್ರ ನಿವಾಸಿ ಅಬ್ದುರೌಫ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಏರ್ ಕಾರ್ಗೋ ಕಾಂಪ್ಲೆಕ್ಸ್ ಮೂಲಕ ಚಿನ್ನ ಸಾಗಿಸಲು ಪ್ರಯತ್ನಿಸಲಾಗಿತ್ತು. ಕೇರಳದ ಹೊರಗಿನವರಿಗಾಗಿ ಈ ಚಿನ್ನವನ್ನು ತಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.