ಹಾವೇರಿ: ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ನಗರದ ಶಾಖಾಮಠವಾದ ಹೊಸಮಠಕ್ಕೆ ಶುಕ್ರವಾರ ರಾತ್ರಿ ಆಗಮಿಸಿದ್ದು, ಶ್ರೀಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇಲ್ಲಿನ ಭಕ್ತರ ಕೋರಿಕೆ ಮೇರೆಗೆ ಶಿವಮೂರ್ತಿ ಮುರುಘಾ ಶರಣರು ಹೊಸಮಠಕ್ಕೆ ಆಗಮಿಸಿದ್ದಾರೆ. ಹೊಸಮಠವು ಮುರುಘಾ ಶರಣರ ಮೂಲ ಮಠವಾಗಿದ್ದು, ಇಲ್ಲಿಯೇ ಅನೇಕ ವರ್ಷಗಳು ಇದ್ದರು. ಹೊಸಮಠವು ಮುರುಘಾ ಶರಣರಿಗೆ ತವರ ಮನೆ ಇದ್ದಂತೆ. ಬೇಜಾರು ಆದಾಗ, ಹೊಸ ವಾತಾವರಣಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಸದ್ಯ ಮುರುಘಾ ಶರಣರು ಮೌನ ವೃತದಲ್ಲಿದ್ದಾರೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾಧ್ಯಮಗಳಿಗೆ ಮಾಹಿತಿ ತಿಳಿಸಿದ್ದಾರೆ.