ಗೋಕಾಕ(ಎಂ.ಮಲ್ಲಾಪುರ): ಗ್ರಾಮದ ಮದಾರಸಾಹೇಬರ ಉರುಸ ನಿಮಿತ್ತ ನ. ೨೯ ಹಾಗೂ ೩೦ರಂದು ೫೫ ಕೆಜಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಏರ್ಪಡಿಸಲಾಗಿದೆ. ೨೯ರ ಮಧ್ಯಾಹ್ನ ೨ ಗಂಟೆಗೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಪಂದ್ಯಾವಳಿ ಉದ್ಘಾಟನೆಯಾಗಲಿದೆ.
ತವಗದ ಬಾಳಯ್ಯ ಸ್ವಾಮಿಗಳು ಪಂದ್ಯಾವಳಿ ಉದ್ಘಾಟಿಸಲಿದ್ದು ಅಂಕಲಗಿ ಮಠದ ಅಮರಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಕೆಜೆಎಸ್ ಸಂಘದ ಅಧ್ಯಕ್ಷ ಭೀಮಗೌಡ ಪೊಲೀಸ್ ಪಾಟೀಲ ಮುಖ್ಯ ಅತಿಥಿಗಳಗಾಗಿ ಆಗಮಿಸುವರು.
ಪ್ರಥಮ ೧೫,೦೦೧, ದ್ವಿತೀಯ ೧೦,೦೦೧, ತ್ರತೀಯ ೭,೦೦೧, ನಾಲ್ಕನೇ ಬಹುಮಾನ ೫,೦೦೧ ರೂ. ಇದೆ. ಅಲ್ಲದೆ ವೈಯಕ್ತಿಕ ಬಹುಮಾನಗಳಿವೆ. ಗ್ರಾಮದ ಹಾಲಿ-ಮಾಜಿ ಸೈನಿಕರ ಸಂಘ, ಮಹಾತ್ಮಾ ಗಾಂಧಿ ಕಬಡ್ಡಿ ತಂಡ ಹಾಗೂ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಜಿಲ್ಲಾ ಘಟಕದ ಆಶ್ರಯದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ.
ತಂಡದಲ್ಲಿ ೫೫ ಕೆಜಿ ೫ ಜನ ಹಾಗೂ ೫೮ ಕೆಜಿಯ ಇಬ್ಬರಿಗೆ ಆಡಲು ಅವಕಾಶ ಕಲ್ಪಿಸಲಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಚಂದ್ರು ಬೊಂಬ್ರಿ ೭೦೨೨೧೨೪೧೪೫, ಅಪ್ಪಣ್ಣ ಪೋಡಿ ೯೭೪೧೩೬೦೫೪೮, ರಾಜು ಹುಕ್ಕೇರಿ ೭೭೯೪೨೭೯೭೮೧, ಮಾರುತಿ ಬೊಂಬ್ರಿ ೯೫೩೮೬೦೭೬೫೭ ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಲು ಕೋರಲಾಗಿದೆ.