ಹೊಟ್ಟೆ ನೋವು ತಾಳದೆ ಮಹಿಳೆ ಆತ್ಮಹತ್ಯೆ

sucide
Advertisement

ಬಾಗಲಕೋಟೆ: ಹೊಟ್ಟೆ ನೋವು ತಾಳಲಾರದೆ ಮಹಿಳೆಯೋರ್ವಳು ನೇಣಿಗೆ ಶರಣಾಗಿರುವ ಘಟನೆ ನವನಗರದ 63ನೇ ಸೆಕ್ಟರ್‌ನಲ್ಲಿ ಶನಿವಾರ ನಡೆದಿದೆ.
ಗೀತಾಂಜಲಿ ವಿಶ್ವನಾಥ ಲೆಕ್ಕದ(೨೪) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದ ಕೆಲ ತಿಂಗಳಿನಿಂದ ಗೀತಾಂಜಲಿ ತೀವ್ರ ತೆರನಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಶನಿವಾರ ಮಧ್ಯಾಹ್ನ 12.30ರ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.