ಬಾಗಲಕೋಟೆ: ಕಾಂಗ್ರೆಸ್ ಪಕ್ಷದಿಂದ ಸತತ ಮೂರು ಬಾರಿ ತೇರದಾಳ ಕ್ಷೇತ್ರ ನಿರ್ವಹಣೆ ಮಾಡಿದ್ದ ಉಮಾಶ್ರೀ ಒಂದು ಬಾರಿ ಶಾಸಕರಾಗಿ ಗೆದ್ದು ಸಚಿವರಾಗಿಯೂ ಸ್ಥಾನಗಿಟ್ಟಿಸಿಕೊಂಡ ಅದೃಷ್ಟ ಅವರದಾಗಿತ್ತು. ಇದೀಗ ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಈ ಬಾರಿ ತೇರದಾಳ ಕ್ಷೇತ್ರದಿಂದ ಪಕ್ಷ ಅಥವಾ ಪಕ್ಷೇತರವಾಗಿಯೂ ಸ್ಪರ್ಧೆ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ಪಕ್ಷದ ಪರವಾಗಿ ಸಿದ್ದು ಕೊಣ್ಣೂರ ಅವರಿಗೆ ಬಿ ಫಾರ್ಮ್ ನೀಡಿದೆ. ಮೇಲಿನಿಂದ ಬಂದ ಆದೇಶದಂತೆ ಕ್ಷೇತ್ರದ ಎಲ್ಲ ಕಾರ್ಯಕರ್ತರೂ, ಮುಖಂಡರು ಸೇರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ.
ಭಿನ್ನಾಭಿಪ್ರಾಯಗಳು ಸಹಜ, ಇವೆಲ್ಲದಕ್ಕೂ ವರಿಷ್ಠರಿಂದ ಸಹಕಾರ ದೊರೆತಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಗೆಲ್ಲಿಸುವ ಕೆಲಸದಲ್ಲಿ ತೊಡಗುತ್ತೇವೆಂದು ಉಮಾಶ್ರೀ ತಿಳಿಸಿದರು.