ಕೊಪ್ಪಳ: ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಇಡಲಾದ ಹುಂಡಿಗಳಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಿಗಿದ್ದು, ೮೩, ೯೬, ೫೨೫ ರೂ. ಹಣ, ೯ ಕೆ.ಜಿ ಬೆಳ್ಳಿ ಹಾಗೂ ೧೭೫ ಗ್ರಾಂ ಬಂಗಾರ ಸಂಗ್ರಹವಾಗಿದೆ.
ಶನಿವಾರ ಮತ್ತು ಬುಧವಾರ ಎರಡು ದಿನಗಳ ಕಾಲ ಎಣಿಕೆ ಕಾರ್ಯ ನಡೆದಿದ್ದು, ಶನಿವಾರ ೬೦,೬೪,೬೪೫ ರೂ. ಹಾಗೂ ಬುಧವಾರ ೨೩,೩೧,೮೮೦ ರೂ. ಒಟ್ಟು ೮೩, ೯೬, ೫೨೫ ರೂಪಾಯಿ ಹಣ ಹುಂಡಿಗಳಿಂದ ಸಂಗ್ರಹವಾಗಿದೆ. ಶನಿವಾರ ೮ ಕೆ.ಜಿ ಬೆಳ್ಳಿ, ೧೬೦ ಗ್ರಾಂ ಬಂಗಾರ ಮತ್ತು ಬುಧವಾರ ೧ ಕೆ.ಜಿ ಬೆಳ್ಳಿ, ೧೫ ಗ್ರಾಂ ಕಚ್ಚಾ ಬಂಗಾರ ಸಂಗ್ರಹವಾಗಿದೆ.