ಹುಬ್ಬಳ್ಳಿ ಟ್ರ್ಯಾಕ್‌ಗೆ ವಂದೇ ಭಾರತ್ ರೈಲು

2023
Advertisement

ಹುಬ್ಬಳ್ಳಿ: 2023ರ ಮಾರ್ಚ್‌ ವೇಳೆಗೆ ರಾಜ್ಯದಲ್ಲಿ ಮತ್ತೊಂದು ವಂದೇ ಭಾರತ್‌ ರೈಲು ಸಂಚರಿಸುವ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಧಾರವಾಡ-ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲಿಗೆ ಪೂರಕವಾಗಿ ಟ್ರ್ಯಾಕ್ ಉನ್ನತೀಕರಿಸಲಾಗಿದ್ದು, ಗಂಟೆಗೆ 120 ಕಿ.ಮೀ. ವೇಗಕ್ಕೆ ಅನುಗುಣವಾಗಿ ಟ್ರ್ಯಾಕ್ ನಿರ್ಮಿಸಲಾಗಿದೆ. ಈ ಕುರಿತು ಈಗಾಗಲೇ ಘೋಷಣೆ ಮಾಡಿರುವ ರೈಲ್ವೆ ಇಲಾಖೆ ಇದಕ್ಕೆ ಪೂರಕವಾದ ಕಾಮಗಾರಿ ಕೈಗೊಂಡಿದೆ. ಕರ್ನಾಟಕದ ಮೊದಲ ವಂದೇ ಭಾರತ್ ರೈಲು ಈಗಾಗಲೇ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸಂಚಾರ ನಡೆಸುತ್ತಿದೆ.