ಹುಬ್ಬಳ್ಳಿಯಲ್ಲಿ ಜೋಶಿ ತುರ್ತು ಸಭೆ

ಜೋಶಿ
Advertisement

ಹುಬ್ಬಳ್ಳಿ: ಅತ್ತ ಬೆಂಗಳೂರಿನಲ್ಲಿ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸುತ್ತಿದ್ದಂತೆಯೇ ಇತ್ತ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಅಖಾಡಕ್ಕಿಳಿದರು.
ತರಾತುರಿಯಲ್ಲಿ ಪಕ್ಷದ ಮುಖಂಡರ, ಪದಾಧಿಕಾರಿಗಳ ಸಭೆ ಕರೆದರು. ಶೆಟ್ಟರಗೆ ಟಿಕೆಟ್ ಕೊಡದೇ ಇದ್ದರೆ ರಾಜೀನಾಮೆ ಕೊಡಿತ್ತೇವೆ ಎಂದು ಪಕ್ಷದ ಅಧ್ಯಕ್ಷರಿಗೆ ಎಚ್ಚರಿಕೆ ಪತ್ರ ರವಾನಿಸಿದ್ದವರನ್ನೂ ಸಭೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ.
ಶೆಟ್ಟರ ಪ್ರಭಾವ ಕೇವಲ ಧಾರವಾಡ ಜಿಲ್ಲೆಯಷ್ಟೇ ಅಲ್ಲ. ಹಾವೇರಿ, ಗದಗ ಜಿಲ್ಲೆಗಳಲ್ಲೂ ಇದ್ದು, ಅಲ್ಲಿನ ಪಕ್ಷದ ನಾಯಕರನ್ನು ಸಭೆ ಕರೆಸಿದ್ದರು.
ಪಕ್ಷದ ಗೆಲುವಿಗೆ ಕಟಿಬದ್ಧರಾಗಿ ಕೆಲಸ ಮಾಡಬೇಕು. ಮನಸೋ ಇಚ್ಛೆ ಪಕ್ಷದ ಬಗ್ಗೆ, ಬೆಳವಣಿಗೆಗಳ ಬಗ್ಗೆ ಮಾತನಾಡುವ ಹಾಗಿಲ್ಲ. ಮಾತನಾಡಿದರೆ ಅದರ ಪ್ರತಿಫಲ ನಿಮಗೇ ಸಿಕ್ಕೇ ಸಿಗುತ್ತದೆ. ಆಯ್ಕೆ ನಿಮ್ಮದು. ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ಬ್ರೇಕ್ ಫೇಲ್ ಆಗಲೂ ಬಿಡಬೇಡಿ ಎಂದು ಎಚ್ಚರಿಕೆ ನೀಡಿದರು ಎಂದು ಮೂಲಗಳಿಂದ ತಿಳಿದಿದೆ.