ಹುಬ್ಬಳ್ಳಿಗರ ನಿದ್ದೆಗೆಡಿಸಿದ ಚಾಲಾಕಿ ಕಳ್ಳ

ಕಳ್ಳ
Advertisement

ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿಯೇ ಹುಬ್ಬಳ್ಳಿಯಲ್ಲಿ ಒಂದಿಲ್ಲೊಂದು ಮನೆಯಲ್ಲಿ ಕಳ್ಳತನ ಸುದ್ದಿ ಕೇಳತೊಡಗಿದೆ. ಬೀಗ ಹಾಕಿರುವ ಮನೆಗಳನ್ನೇ ಟಾರ್ಗೆಟ್‌ ಮಾಡಿರುವ ಚಾಲಾಕಿ ಕಳ್ಳ ತನ್ನ ಕೈಚಳಕವನ್ನು ಕಳೆದೆರೆಡು ತಿಂಗಳಿಂದ ತೋರುತ್ತಿದ್ದಾನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮನೆಯ ಆಸುಪಾಸಿನಲ್ಲೇ ನಿನ್ನೆ ಒಂದೇ ರಾತ್ರಿಯಲ್ಲಿ ಮೂರು ಮನೆಯಲ್ಲಿ ಕಳ್ಳತನ ನಡೆಸಿದ್ದು, ಸುಮಾರು ಮೂರು ಲಕ್ಷ ಬೆಲೆಯ ಬೆಳ್ಳಿ ಆಭರಣ, 1.5 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾನೆ.
ಹೀಗೆ ಕಳೆದ ಎರೆಡು ತಿಂಗಳಿಂದ ವಾಣಿಜ್ಯನಗರಿ ನಿವಾಸಿಗಳ ನಿದ್ದೆಗೆಡೆಸಿರುವ ಕಳ್ಳನ ಚಲನವಲದ ದೃಶ್ಯ ಬಡಾವಣೆಯ ಕೆಲ ಮನೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಗಲ ಮೇಲೊಂದು, ಕೈಯಲ್ಲೊಂದು ಬ್ಯಾಗ್‌ ಹಿಡಿದು ಮುಖಕ್ಕೆ ಮಾಸ್ಕ್‌ ಹಾಕಿ ಸಂಪೂರ್ಣ ಮುಚ್ಚಿಕೊಂಡು ಮನೆಗಳಿಗೆ ಎಂಟ್ರಿ ಕೊಡುವ ಕಳ್ಳ. ಯಾವುದೇ ಇಂಟರ್‌ ಲಾಕ್‌ ಇದ್ದರು ಸಲೀಸಾಗಿ ಕತ್ತರಿಸಿ ಒಳ ನುಗ್ಗಿ ಕೈಗೆ ಸಿಕ್ಕಷ್ಟು ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಎರಡು ತಿಂಗಳಿಂದ ಕಳ್ಳತನ ನಡೆಯುತ್ತಿದ್ದರೂ ಪೊಲೀಸರಿಗೆ ಆತನನ್ನು ಹಿಡಿಯಲು ಆಗುತ್ತಿಲ್ಲ.