ಧಾರವಾಡ: ಜೆಎಸ್ಎಸ್ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಯರ್ಮಾಳಗೆ ಕೊಂಡೊಯ್ಯಲಾಯಿತು.
ಜೆಎಸ್ಎಸ್ ಹಾಗೂ ಎಸ್ಡಿಎಂನ ಅಪಾರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಅಲ್ಲದೇ ನಗರ ಗಣ್ಯರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ವಜ್ರಕುಮಾರ ಸರ್ ಅಮರ ರಹೇ ಎಂಬ ಘೋಷಣೆ ಕೂಗುತ್ತ ಅವರ ಪಾರ್ಥಿವ ಶರೀರವನ್ನು ಹುಟ್ಟೂರಿನತ್ತ ತೆಗೆದುಕೊಂಡು ಹೋಗಲಾಯಿತು.