ಹಿರಿಯ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

ವಿಧಾನ ಸೌಧ
Advertisement

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಹಿರಿಯ‌ ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ಹಾಗೂ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಲೋಕ್ ಮೋಹನ್ – ರಾಜ್ಯ ಕಾರಾಗೃಹ ಇಲಾಖೆ ಡಿಜಿಪಿಯಿಂದ ಅಗ್ನಿಶಾಮಕ & ತುರ್ತುಸೇವೆ ಡಿಜಿಪಿಯಾಗಿ, ಸಿ.ಹೆಚ್ ಪ್ರತಾಪ್ ರೆಡ್ಡಿ – ಎಡಿಜಿಪಿ ಹುದ್ದೆಯಿಂದ ಡಿಜಿಪಿಯಾಗಿ ಬಡ್ತಿ ನೀಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಮುಂದುವರೆಸಲಾಗಿದೆ. ಕೇಂದ್ರೀಯ ಸೇವೆಯಲ್ಲಿರುವ ಪಿ.ಕೆ.ಠಾಕೂರ್ – ಎಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದ್ದು, ಸೆಂಟ್ರಲ್ ಇಂಟಲಿಜೆನ್ಸ್ ಬ್ಯೂರೋದಲ್ಲಿ ಮುಂದುವರಿಸಲಾಗಿದೆ. ಮನೀಶ್ ಕರ್ಬಿಕರ್ – ಈಶಾನ್ಯ ವಲಯದ ಐಜಿಪಿಯಿಂದ ಎಡಿಜಿಪಿಯಾಗಿ ಬಡ್ತಿ ನೀಡಲಾಗಿದ್ದು ರಾಜ್ಯ ಕಾರಾಗೃಹ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಸೌಮೇಂದು ಮುಖರ್ಜಿ ಐಜಿಪಿಯಿಂದ ಎಡಿಜಿಪಿಯಾಗಿ ಬಡ್ತಿ ನೀಡಲಾಗಿದ್ದು ಪೊಲೀಸ್ ಸಂಪರ್ಕ – ಸಂವಹನ ಹಾಗೂ ಆಧುನೀಕರಣ ಇಲಾಖೆಗೆ ವರ್ಗಾಯಿಸಲಾಗಿದೆ.ಎಂ.ಚಂದ್ರಶೇಖರ್ – ಐಜಿಪಿ‌ ಕೇಂದ್ರ ವಲಯದಿಂದ ಎಡಿಜಿಪಿಯಾಗಿ ಬಡ್ತಿ ನೀಡಿ ಬೆಂಗಳೂರು ಪೂರ್ವ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಸತೀಶ್ ಕುಮಾರ್ – ಐಜಿಪಿ ಉತ್ತರ ವಲಯ ಬೆಳಗಾವಿಯಿಂದ ಐಜಿಪಿ ಈಶಾನ್ಯ ವಲಯಕ್ಕೆ ವರ್ಗಾಯಿಸಲಾಗಿದೆ. ರಮಣ್​ ಗುಪ್ತಾ ಡಿಐಜಿ ಇಂಟಲಿಜೆನ್ಸ್ ಬೆಂಗಳೂರಿನಿಂದ ಐಜಿಪಿ‌ಯಾಗಿ ಬಡ್ತಿ ನೀಡಿ ಉತ್ತರ ವಲಯ ಬೆಳಗಾವಿಗೆ ವರ್ಗಾವಣೆ ಮಾಡಲಾಗಿದೆ‌. ಡಾ.ಬಿ.ಆರ್.ರವಿಕಾಂತೇ ಗೌಡ ಡಿಐಜಿ ಸಿಐಡಿಯಿಂದ ಐಜಿಪಿಯಾಗಿ ಬಡ್ತಿ ನೀಡಿ ಕೇಂದ್ರ ವಲಯಕ್ಕೆ ವರ್ಗಾಯಿಸಲಾಗಿದೆ. ಸಿದ್ಧರಾಮಪ್ಪ ಡಿಐಜಿಯಿಂದ ಐಜಿಪಿಯಾಗಿ ಬಡ್ತಿ ನೀಡಲಾಗಿದ್ದು ಟ್ರಾನ್ಸ್‌ಪೋರ್ಟ್‌ & ರೋಡ್ ಸೇಫ್ಟಿ ಕಮಿಷನರ್ ಆಗಿ ಮುಂದುವರಿಸಲಾಗಿದೆ. ಬಿ.ಎಸ್.ಲೋಕೇಶ್ ಕುಮಾರ್ ಡಿಐಜಿಯಿಂದ ಐಜಿಪಿಯಾಗಿ ಬಡ್ತಿ ನೀಡಲಾಗಿದ್ದು ಬಳ್ಳಾರಿ‌ ವಲಯದಲ್ಲಿ ಐಜಿಪಿಯಾಗಿ‌ ಮುಂದುವರಿಸಲಾಗಿದೆ. ಕೆ.ಟಿ. ಬಾಲಕೃಷ್ಣ ಡಿಐಜಿಯಿಂದ ಐಜಿಪಿಯಾಗಿ ಬಡ್ತಿ ನೀಡಲಾಗಿದ್ದು, ಫೈರ್ ಸರ್ವಿಸಸ್​ನಲ್ಲಿ ಮುಂದುವರಿಸಲಾಗಿದೆ. ಡಾ.ಎಸ್.ಡಿ.ಶರಣಪ್ಪ ಎಸ್​ಎಸ್ಪಿಯಿಂದ ಡಿಐಜಿಯಾಗಿ ಬಡ್ತಿ ನೀಡಲಾಗಿದ್ದು ಸಿಸಿಬಿ ಬೆಂಗಳೂರು ಮುಖ್ಯಸ್ಥರಾಗಿ ಮುಂದುವರಿಸಲಾಗಿದೆ‌.ಎಂ.ಎನ್.ಅನುಚೇತ್ ಎಸ್ಎಸ್ಪಿಯಿಂದ ಡಿಐಜಿಯಾಗಿ ಬಡ್ತಿ ನೀಡಲಾಗಿದ್ದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿ ಮುಂದುವರೆಸಲಾಗಿದೆ‌. ರವಿ ಡಿ ಚೆನ್ನಣ್ಣನವರ್ ಎಸ್ಎಸ್ಪಿಯಿಂದ ಡಿಐಜಿಯಾಗಿ ಬಡ್ತಿ ನೀಡಿ, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರೆಸಲಾಗಿದೆ. ರಮೇಶ್ ಬಾನೋತ್ ಎಸ್ಎಸ್ಪಿಯಿಂದ ಡಿಐಜಿಯಾಗಿ ಬಡ್ತಿ ನೀಡಲಾಗಿದ್ದು ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಮುಂದುವರೆಸಲಾಗಿದೆ. ಯಡಾ ಮಾರ್ಟಿನ್ ಎಸ್ಎಸ್ಪಿಯಿಂದ ಡಿಐಜಿಯಾಗಿ ಬಡ್ತಿ ನೀಡಲಾಗಿದ್ದು ಪೊಲೀಸ್ ತರಬೇತಿ ಶಾಲೆ ಗುಲ್ಬರ್ಗಾದಿಂದ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಹಾಗೂ ದಿವ್ಯಾ ಗೋಪಿನಾಥ್ ಇಂಟಲಿಜೆನ್ಸ್ ಎಸ್.ಪಿ.ಯಾಗಿ ಸ್ಥಳ ನಿಯುಕ್ತಿಗೊಳಿಸಲಾಗಿದೆ‌