ಕಲಬುರಗಿ: “ನಾನು ಮನುವಾದ ಮತ್ತು ಹಿಂದುತ್ವದ ವಿರೋಧಿಯಾಗಿದ್ದೇನೆ. ಆದರೆ, ಹಿಂದೂ ಧರ್ಮವನ್ನು ಎಂದೂ ವಿರೋಧಿಸಿಲ್ಲ.” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ನನ್ನನ್ನು ಹಿಂದೂ ಧರ್ಮದ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ನಾನೂ ಸಹ ಹಿಂದೂನೇ. ಆದರೆ, ಯಾವುದೇ ಧರ್ಮದಲ್ಲೂ ಕೊಲೆ, ಹಿಂಸೆಗೆ ಪ್ರೋತ್ಸಾಹವಿಲ್ಲ. ಇದಕ್ಕೆಲ್ಲ ಪ್ರೋತ್ಸಾಹ ಇರೋದು ಕೇವಲ ಹಿಂದುತ್ವದಲ್ಲಿ ಮಾತ್ರ ಎಂದರು.