ಹಾಸನ ಟಿಕೆಟ್‌ ಹಂಚಿಕೆ ದೇವಗೌಡರ ಅಂಗಳಕ್ಕೆ

Advertisement

ಚಿಕ್ಕಮಗಳೂರು: ಹಾಸನದಲ್ಲಿ ಟಿಕೆಟ್‌ ಹಂಚಿಕೆ ವಿಚಾರವಾಗಿ ಜಿಲ್ಲೆಯ ಸಮಾನ ಮನಸ್ಕರೊಂದಿಗೆ ಚರ್ಚೆ ಮಾಡಲು ನಿಗದಿಯಾಗಿದ್ದ ಸಭೆ ರಾತ್ರಿ ವೇಳೆ ರದ್ದಾಗಿದೆ ಎಂದು ಮಾಧ್ಯಮಗಳಿಂದ ತಿಳಿದಿದೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರೇ (ಎಚ್.ಡಿ. ದೇವೇಗೌಡ) ಸಭೆಯನ್ನು ಕರೆಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಈ ಕುರಿತು ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯ 3ನೇ ದಿನ ಯಾತ್ರೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರ ಮುಕ್ತಾಯಾವಾಗಿದೆ. ನಾಳೆ ಚನ್ನಪಟ್ಟಣದಲ್ಲಿ ಸಭೆ ಇರುವ ಕಾರಣ ಪಂಚರತ್ನ ಯಾತ್ರೆ ಸೋಮವಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ನಡೆಯುಲಿದೆ. ಹಾಸನ ಟಿಕೆಟ್‌ ಹಂಚಿಕೆ ಕುರಿತು ಹಾಸನ ವಿಧಾನ ಕ್ಷೇತ್ರದ ವ್ಯಾಪ್ತಿಯ ಸಮಾನಮನಸ್ಕರನ್ನು ಸಭೆಗೆ ಬರುವುದಕ್ಕೆ ಹೇಳಿದ್ದೆ ಎಂದರು.