ಹಾವೇರಿ: ಒಂದು ಕೋಟಿಗೂ ಅಧಿಕ ಮೌಲ್ಯದ ನಗದು, ಐದು ಕಾರುಗಳು, ಒಂದು ಏರ್ ಗನ್, 6 ಮೊಬೈಲ್ ಫೋನ್ ಗಳು ಮತ್ತು 3 ಲ್ಯಾಪ್ ಟಾಪ್ ಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳ ಜಪ್ತಿ.
ಕೇರಳ ರಾಜ್ಯದ ಅಂತೋನಿ ಅಲಿಯಾಸ್ ಅಂಟಪ್ಪನ್(೨೨ ವರ್ಷ), ಅಬ್ಬಾಸ್ ಇ.ಎಸ್ ಪಿರಾಯಿರಿ(೩೮ ವರ್ಷ), ನಿಶಾದಬಾಬು ಅಲಿಯಾಸ್ ಬಾಬು.ಟಿ(೪೭ ವರ್ಷ) ಮತ್ತು ಭರತಕುಮಾರ ಅಲಿಯಾಸ್ ಕುಟ್ಟಾ(೨೯ ವರ್ಷ) ಬಂಧಿತ ಆರೋಪಿಗಳು.
ಹವಾಲಾ ಹಣ ಸಾಗಣೆ ಮಾಡುವ ಮತ್ತು ಬಂಗಾರವನ್ನು ಕಳ್ಳಸಾಗಣೆ ಮಾಡುವ ವ್ಯಾಪಾರಿಗಳನ್ನು ಗುರಿಯಾಗಿಟ್ಟುಕೊಂಡು ಕೃತ್ಯ ಎಸುಗುತ್ತಿದ್ದ ಗ್ಯಾಂಗ್. ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರ ತಂಡ. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣದ ಬೆನ್ನು ಬಿದ್ದ ಪೊಲೀಸರಿಂದ ಭರ್ಜರಿ ಭೇಟೆ.
ಆರೋಪಿಗಳ ವಿರುದ್ಧ ಬ್ಯಾಡಗಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳು. ಡಿವೈಎಸ್ಪಿ ಶಿವಾನಂದ ಚಲವಾದಿ, ಸಿಪಿಐಗಳಾದ ಸಿದ್ದಾರೂಢ ಬಡಿಗೇರ, ಸಂತೋಷ ಪಾಟೀಲ ನೇತೃತ್ವದ ತಂಡದ ಪೊಲೀಸರಿಂದ ಆರೋಪಿಗಳ ಬಂಧನ.