ಹುಬ್ಬಳ್ಳಿ: ಹಾವೇರಿಯಲ್ಲಿ ಜ.೬,೭ ಮತ್ತು ೮ರಂದು ನಡೆಯುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಾಹಿತ್ಯ ಅಭಿಮಾನಿಗಳು, ಕನ್ನಡ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ಮೂರು ದಿನ ಕೆಲ ವಿಶೇಷ ರೈಲು ಸಂಚಾರ ಹಾಗೂ ಹಾವೇರಿ ಮಾರ್ಗವಾಗಿ ಸಾಗುವ ಕೆಲ ಎಕ್ಸಪ್ರೆಸ್ ರೈಲುಗಳಿಗೆ ಹಾವೇರಿಯ ಮೈಲಾರ ಮಹದೇವಪ್ಪ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ವ್ಯವಸ್ಥೆ ಮಾಡಿದೆ.
ಸಾರ್ವಜನಿಕರು ಪ್ರಯೋಜನ ಪಡೆಯಬೇಕು ಎಂದು ನೈಋತ್ಯ ರೈಲ್ವೆ ತಿಳಿಸಿದೆ.
- ವಿಶೇಷ ರೈಲುಗಳು:
ಯಶವಂತಪುರ ಸ್ಪೆಷಲ್ ಎಕ್ಸಪ್ರೆಸ್( ಯಶವಂತಪುರ- ಹುಬ್ಬಳ್ಳಿ- ೦೬೫೦೧/೦೬೫೦೨) ಜ.೫ರಂದು ಯಶವಂತಪುರದಿAದ ರಾತ್ರಿ ೧೧.೫೦ಕ್ಕೆ ಹೊರಟು ಹುಬ್ಬಳ್ಳಿಗೆ ಮರುದಿನ ಬೆಳಿಗ್ಗೆ ೭.೫೦ಕ್ಕೆ ತಲುಪಲಿದೆ. ಇದೇ ರೈಲು ಜ.೬ರಂದು ಬೆಳಿಗ್ಗೆ ೧೧.೩೦ಕ್ಕೆ ಹೊರಟು ರಾತ್ರಿ ೭.೩೦ಕ್ಕೆ ಯಶವಂತಪುರಕ್ಕೆ ತಲುಪಲಿದೆ.
ಜ.೬ರಂದು ಯಶವಂತಪುರ ಎಕ್ಸಪ್ರೆಸ್ ( ಟ್ರೇನ್-೦೬೫೦೫/೦೬೫೦೬) ಯಶವಂತಪುರ- ಹುಬ್ಬಳ್ಳಿ ರೈಲು ರಾತ್ರಿ ೧೦.೩೦ಕ್ಕೆ ಯಶವಂತಪುರದಿAದ ಹೊರಟು ಮರುದಿನ ಬೆಳಿಗ್ಗೆ ೫.೩೦ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಜ.೭ ರಂದು ಬೆಳಿಗ್ಗೆ ೮.೩೦ಕ್ಕೆ ಹೊರಟು ( ಟ್ರೇನ್ ಸಂಖ್ಯೆ- ೦೬೫೦೬) ಸಂಜೆ ೫ಕ್ಕೆ ಬೆಂಗಳೂರು ತಲುಪಲಿದೆ.
ಜ.೭ರಂದು ಯಶವಂತಪುರ -ಹುಬ್ಬಳ್ಳಿ ಸ್ಪೆಷಲ್ ಎಕ್ಸಪ್ರೆಸ್ ( ಟ್ರೇನ್- ೦೬೫೦೭) (ಒನ್ ವೇ) ರಾತ್ರಿ ೯.೫೦ಕ್ಕೆ ಯಶವಂತಪುರದಿAದ ಹೊರಟು ಹುಬ್ಬಳ್ಳಿಗೆ ಮರುದಿನ ಬೆಳಿಗ್ಗೆ ೫.೨೦ಕ್ಕೆ ತಲುಪಲಿದೆ.
ಜ.೮ರಂದು ಹುಬ್ಬಳ್ಳಿ- ಎಸ್ಎಂಎA ಹಾವೇರಿ ಸ್ಪೆಷಲ್ ಎಕ್ಸಪ್ರೆಸ್ ರೈಲು (ಟ್ರೇನ್- ೦೬೫೦೮) ಹುಬ್ಬಳ್ಳಿಯಿಂದ ಸಂಜೆ ೬ಕ್ಕೆ ಹೊರಟು ರಾತ್ರಿ ೭.೪೦ಕ್ಕೆ ಹಾವೇರಿ ತಲುಪಲಿದೆ.
ಜ.೮ರಂದು ಹಾವೇರಿ -ಯಶವಂತಪುರ ಸ್ಪೆಷಲ್ ಎಕ್ಸಪ್ರೆಸ್ (ಒನ್ವೇ)( ಟ್ರೇನ್- ೦೮೫೧೭) ಬೆಳಿಗ್ಗೆ ೧೧ಕ್ಕೆ ಹಾವೇರಿಯಿಂದ ಹೊರಟು ಸಂಜೆ ೫.೩೦ಕ್ಕೆ ಯಶವಂತಪುರ ತಲುಪಲಿದೆ.
ತಾತ್ಕಾಲಿಕ ನಿಲುಗಡೆ ರೈಲುಗಳು
ಜ.೫ರಿಂದ ೯ರವರೆಗೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರೈಲ್ವೆ ನಿಲ್ದಾಣದಿಂದ ಬೆಳಗಾವಿಗೆ ತೆರಳುವ (ಕೆಎಸ್ಆರ್-ಬೆಳಗಾವಿ) ರೈಲು ಬೆಳಿಗ್ಗೆ ೨.೨೮ಕ್ಕೆ ಆಗಮಿಸಿ ೨.೩೦ಕ್ಕೆ ಬೆಳಗಾವಿಗೆ ನಿರ್ಗಮಿಸಲಿದೆ. ನಿಗದಿತ ದಿನಾಂಕಗಳAದು ಇದೇ ರೈಲು ( ಬೆಳಗಾವಿ-ಕೆಎಸ್ಆರ್) ರಾತ್ರಿ ೧೧.೫೦ಕ್ಕೆ ಆಗಮಿಸಿ ೧೧.೫೨ಕ್ಕೆ ಬೆಂಗಳೂರಿಗೆ ನಿರ್ಗಮಿಸಲಿದೆ.
ಜ.೫ರಂದು ಬಾರ್ಮರ್-ಯಶವಂತಪುರ ರೈಲು ಬೆಳಿಗ್ಗೆ ೯.೦೩ಕ್ಕೆ ರೈಲ್ವೆ ನಿಲ್ದಾಣಕ್ಕೆ ಬಂದು ೯.೦೫ಕ್ಕೆ ಹೊರಡುವುದು, ಯಶವಂತಪುರ-ಬಿಕಾನೇರ ರೈಲು ಜ.೬ ಮತ್ತು ೭ರಂದು ಸಂಜೆ ೪.೫೦ಕ್ಕೆ ಬಂದು ೪.೫೨ಕ್ಕೆ ನಿರ್ಗಮಿಸಲಿದೆ.
ಜ.೬ರಂದು ತಿರುಚರಪಳ್ಳಿ- ಗಂಗಾನಗರ ರೈಲು ಸಂಜೆ ೫.೫೮ಕ್ಕೆ ಆಗಮಿಸಿ ೬ ಗಂಟೆಗೆ ನಿರ್ಗಮಿಸಲಿದೆ. ಜ.೭ರಂದು ಚಂಡೀಘಡ-ಯಶವAತಪುರ ರೈಲು ರಾತ್ರಿ ೧೧.೧೮ಕ್ಕೆ ಬಂದು ೧೧.೨೦ಕ್ಕೆ ನಿರ್ಗಮಿಸಲಿದೆ. ಇದೇ ರೈಲು ಯಶವಂತಪುರ ಕಡೆಯಿಂದ ಚಂಡಿಘಡಕ್ಕೆ ತೆರಳುವಾಗ ಸಂಜೆ ೭.೧೮ಕ್ಕೆ ಬಂದು ೭.೨೦ಕ್ಕೆ ನಿರ್ಗಮಿಸಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.