ಪಣಜಿ: ಗೋವಾದ ಹರ್ಮಲ್ ಕಡಲತೀರದಲ್ಲಿ ಡಾಲ್ಫಿನ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪಣಜಿ ವೈಲ್ಡ್ ಅನಿಮಲ್ ಟೆಂಪರರಿ ಶೆಲ್ಟರ್ ಸೆಂಟರ್ ಸಿಬ್ಬಂದಿ ಹಾಗೂ ದೃಷ್ಟಿ ಲೈಫ್ ಸೇವರ್ ಸಂಸ್ಥೆಯ ಸಿಬ್ಬಂದಿ ಈ ಡಾಲ್ಫಿನ್ ಅಂತ್ಯಸಂಸ್ಕಾರ ನೆರವೇರಿಸಿದರು.
೧೨ ಅಡಿ ಉದ್ದದ ಡಾಲ್ಫಿನ್ ಮೃತಪಡಲು ಕಾರಣವೇನು ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ವನ್ಯಜೀವಿ ತಾತ್ಕಾಲಿಕ ಆಶ್ರಯ ಕೇಂದ್ರದ ಸಿಬ್ಬಂದಿ ದ್ಯಾನೇಶ್ವರ್ ಟಕ್ಕರ್ ಮತ್ತು ಮೆಲ್ವಿನ್ ಡಿಸಿಲ್ವಾ ಅವರು ಡಾಲ್ಫಿನ್ ಕನಿಷ್ಠ ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದೆ ಎಂದು ಅಂದಾಜಿಸಿದ್ದಾರೆ. ಡಾಲ್ಫಿನ್‌ಗಳ ಜೀವಿತಾವಧಿ ೧೦ ರಿಂದ ೧೨ ವರ್ಷಗಳು ಎಂದೇ ಹೇಳಲಾಗಿದೆ.
ಕರಣ್ ತಾಂಡೇಲ್ ಮತ್ತು ಇತರ ಸಹೋದ್ಯೋಗಿಗಳು ದೃಷ್ಟಿ ಸಿಬ್ಬಂದಿಗೆ ಡಾಲ್ಫಿನ್ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಿದರು. ಈ ಕಾರ್ಯದಲ್ಲಿ ಹರ್ಮಲ್ ಪಂಚಾಯತ ಅಧ್ಯಕ್ಷ ಬರ್ನಾಡ್ ಫರ್ನಾಂಡಿಸ್ ಸಹಕರಿಸಿದರು.