ಹದೇವಪುರ ಸೂರ್ಯ ಹುಟ್ಟುವ ದಿಕ್ಕು, ಅದು ಕತ್ತಲಾಗಬಾರದು ; ಅರವಿಂದ್ ಲಿಂಬಾವಳಿ

Advertisement

ಬೆಂಗಳೂರು: ಮಹದೇವಪುರ ಸೂರ್ಯ ಹುಟ್ಟುವ ದಿಕ್ಕು, ಅದು ಕತ್ತಲಾಗಬಾರದು, ನಮ್ಮ ಕ್ಷೇತ್ರಕ್ಕೆ ಮಲತಾಯಿ ಧೋರಣೆ ಮಾಡಬೇಡಿ ಎಂದು ಶಾಸಕ ಅರವಿಂದ್ ಲಿಂಬಾವಳಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ಧಾರೆ.

ಮಹದೇವಪುರ ಕ್ಷೇತ್ರದ ರಸ್ತೆಗಳಲ್ಲಿ ನೀರು ತುಂಬಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅರವಿಂದ್ ಲಿಂಬಾವಳಿ ಅವರು ‘ಕ್ಷೇತ್ರದಲ್ಲಿ 10 mm ಗಿಂತ ಹೆಚ್ಚು ಮಳೆ ಆಗಿದೆ, ಮಹದೇವಪುರದಲ್ಲಿ 69 ಕೆರೆಗಳಿದ್ದು ಎಲ್ಲವೂ ತುಂಬಿದ್ದು ನೀರು ರಸ್ತೆ, ಬಡಾವಣೆಗಳಿಗೆ ಹರಿದು ಬಂದಿದೆ. ಮಹದೇವಪುರ ಸೂರ್ಯ ಹುಟ್ಟುವ ದಿಕ್ಕು ಅದು ಕತ್ತಲಾಗಬಾರದು. ಈ ಕ್ಷೇತ್ರದಿಂದ 2988 ಕೋಟಿ ತೆರಿಗೆ , ಆಸ್ತಿ ಮಾರಾಟದಿಂದ, ವಾಣಿಜ್ಯ ಸೇರಿ ಅತಿ ಹೆಚ್ಚು ತೆರಿಗೆ ಬಂದಿದೆ.