ಹಂಪಿ ರಾಮಮಂದಿರದಲ್ಲಿ ವಿದೇಶಿಯರ ರಾಮ ಕೋಟಿ ಜಪ

Advertisement

ಹೊಸಪೇಟೆ: ಪ್ರಸಿದ್ಧ ಸ್ಮಾರಕಗಳನ್ನು ಕಣ್ತುಂಬಿಸಿಕೊಳ್ಳಲು ಹಂಪಿಗೆ ಆಗಮಿಸಿದ ದೇಶ-ವಿದೇಶಿ ಪ್ರವಾಸಿಗರು ಹಂಪಿಯ ರಾಮನ ದೇಗುಲದಲ್ಲಿ ರಾಮಕೋಟಿ ಪಾರಾಯಣ ಮಾಡುವ ಮೂಲಕ ಗಮನ ಸೆಳೆದರು.
ಹಂಪಿಯ ಮಾಲ್ಯವಂತ ರಘುನಾಥ ದೇವಾಲಯವನ್ನು ವೀಕ್ಷಣೆಗೆ ತೆರಳಿದ ವಿದೇಶಿ ಪ್ರವಾಸಿಗರು, ದೇವಾಲಯದಲ್ಲಿ ನಡೆಯುತ್ತಿದ್ದ ರಾಮಜಪ ಪಾರಾಯಣ ಕಂಡು ಮಾರು ಹೋಗಿ ರಾಮಜಪ ಮಾಡುವ ಮೂಲಕ ರಾಮಭಕ್ತರ ಪ್ರೀತಿಗೆ ಪಾತ್ರರಾದರು.
ಹಂಪಿಗೆ ಭೇಟಿ ನೀಡಿದ ಇಸ್ರೇಲ್ ದೇಶದ ಸುಮಾರು ೨೦ ಪ್ರವಾಸಿಗರು ಸೂರ್ಯಸ್ತವನ್ನು ನೋಡಲು ಮಾಲ್ಯವಂತ ರಘುನಾಥ ದೇಗುಲಕ್ಕೆ ಬಂದಿದ್ದರು. ಈ ವೇಳೆ ದೇಗುಲದಲ್ಲಿ ರಾಮನಾಮ ಕೋಟಿ ಹಾಗೂ ಹನುಮಾನ್ ಚಾಲೀಸ ಭಜನೆಯಲ್ಲಿ ಪಾಲ್ಗೊಂಡರು.
ಹಿಂದೂ ಧರ್ಮ ಹಾಗೂ ರಾಮಾಯಣ ಬಗ್ಗೆ ತಿಳಿದುಕೊಂಡಿದ್ದು, ಇಂತಹ ಪವಿತ್ರ ಸ್ಥಳಗಳಿಗೆ ಬಂದಾಗ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದು ವಿದೇಶಿ ಪ್ರವಾಸಿಗರು ಅನಿಸಿಕೆ ಹಂಚಿಕೊಂಡರು. ಹಂಪಿ ಆಧ್ಯಾತ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಪೌರಾಣಿಕ ಪ್ರಸಿದ್ಧಿ ಹೊಂದಿದೆ. ಈ ನಡುವೆಯೂ ಆನೆಗುಂದಿಯ ಹನುಮನ ಜನ್ಮಸ್ಥಳ ಅಂಜನಾದ್ರಿ ಕ್ಷೇತ್ರ ಕೂಡ ಪ್ರಸಿದ್ಧಿ ಹೊಂದುತ್ತಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ.