ಸ್ವದೇಶಿ ಮೊಬೈಲ್‌ OSಗೆ ಗ್ರೀನ್‌ ಸಿಗ್ನಲ್

bharos
Advertisement

ನವದೆಹಲಿ: ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ ಅವರು ಈ ಸ್ವದೇಶಿ ನಿರ್ಮಿತ ಆಪರೇಟಿಂಗ್ ಸಿಸ್ಟಂ BharOSನ ಪರೀಕ್ಷೆಯ ಸಂದರ್ಭದಲ್ಲಿ ವಿಡಿಯೋ ಕಾಲನಲ್ಲಿ ಪಾಲ್ಗೊಳ್ಳುವ ಮೂಲಕ ಅದಕ್ಕೆ ಹಸಿರು ನಿಶಾನೆ ತೋರಿದ್ದಾರೆ.
ಸಂಪೂರ್ಣ ಸ್ವದೇಶಿ ಆಪರೇಟಿಂಗ್ ಸಿಸ್ಟಂ ಬಾರೋಸ್‌ ಅನ್ನು ಮದ್ರಾಸ್ ಐಐಟಿ ಅಭಿವೃದ್ಧಿಪಡಿಸಿದ್ದು, ಕಳೆದ ಕೆಲ ವರ್ಷಗಳಿಂದ ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ವಾವಲಂಭಿಯಾಗುವತ್ತ ದಾಪುಗಾಲು ಇಟ್ಟಿದೆ. ಈ ನಿಟ್ಟಿನಲ್ಲಿ ಇದೀಗ ಭಾರತದ ಮೇಡ್ ಇನ್ ಇಂಡಿಯಾ ಆಪರೇಟಿಂಗ್ ಸಿಸ್ಟಂ BharOS ಇನ್ಮುಂದೆ ಸ್ಮಾರ್ಟ್‌ಫೋನ್‌ಗಳಲ್ಲಿ ಅಂಡ್ರಾಯಿಡ್ ಹಾಗೂ ಐಓಎಸ್‌ಗಳಂತಹ ಆಪರೇಟಿಂಗ್ ಬದಲಿಗೆ ಬಳಕೆಯಾಗಲಿದೆ. ದೀರ್ಘ ಕಾಲದಿಂದ ಚರ್ಚೆಗೆ ಗ್ರಾಸವಾಗಿದ್ದ ಈ ಸಾಫ್ಟ್‌ವೇರ್‌ಗೆ BharOS ಎಂದು ಹೆಸರಿಡಲಾಗಿದೆ.