ಸೋಂಕು ತಡೆ ಹಿನ್ನೆಲೆ-ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಣಕು ಪ್ರದರ್ಶನ

Advertisement

ಕುಷ್ಟಗಿ: ರಾಜ್ಯದಲ್ಲಿ ಕೋವಿಡ್ ಸೋಂಕು, ಓಮೈಕ್ರಾನ್‌ನ ಬಿಎಫ್‌-7 ಉಪತಳಿ ಹರಡುವುದನ್ನು ತಡೆಗಟ್ಟಲು, ಚಿಕಿತ್ಸಾ ವ್ಯವಸ್ಥೆ ಪರಿಶೀಲನೆಗೆ ದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಗಾವಹಿಸಲಾಗುತ್ತಿದೆ. ಅಂತೆಯೇ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸಾ ಕ್ರಮ, ಸಾಧನ, ಸಿಬ್ಬಂದಿ ಕಾರ್ಯಾಚರಣೆ ಬಗ್ಗೆ ಅಣಕು ಪ್ರದರ್ಶನ ನಡೆಸಲಾಯಿತು.
ಆರೋಗ್ಯ ಸೌಲಭ್ಯಗಳ ಲಭ್ಯತೆ, ಪ್ರತ್ಯೇಕ ಹಾಸಿಗೆಗಳ ಸಾಮರ್ಥ್ಯ, ಆಮ್ಲಜನಕ-ಬೆಂಬಲಿತ ಹಾಸಿಗೆಗಳು, ಐಸಿಯು (ತೀವ್ರ ನಿಗಾ ಘಟಕ) ಹಾಸಿಗೆಗಳು ಮತ್ತು ವೆಂಟಿಲೇಟರ್ ಬೆಂಬಲಿತ ಹಾಸಿಗೆಗಳಂತಹ ವಿಚಾರಗಳ ಮೇಲೆ ಈ ಡ್ರಿಲ್ ಕೇಂದ್ರೀಕರಿಸುತ್ತದೆ.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮೊಕ್​ ಡ್ರಿಲ್​​​​​​​ ನಡೆಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ, ಬೆಡ್‌ಗಳ ಸಿದ್ಧತೆ, ಔಷಧಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ. ಆಕ್ಸಿಜನ್ ಪ್ಲಾಂಟ್‌ಗಳಲ್ಲಿ ಡ್ರೈರನ್ ಮಾಡಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆಕ್ಸಿಜನ್ ಪ್ಲಾಂಟ್‌ಗಳು ಸರಿಯಾಗಿವೆಯೇ ಎಂದು ಪರೀಶಿಲನೆ ನಡೆಸಲಾಗುತ್ತಿದೆ.
ಈ ಹಿಂದೆ ಸರಿಯಾದ ಮಾಹಿತಿ ಹಾಗೂ ಆಕ್ಸಿಜನ್ ಕೊರತೆಯಿಂದ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿರಲಿಲ್ಲ. ಆದರೀಗ ರೂಪಾಂತರಿ ಆತಂಕ ಇರುವದರಿಂದ ಮಾಕ್ ಡ್ರಿಲ್ ಮಾಡಲು ಇಲಾಖೆ ಮುಂದಾಗಿದೆ. ಈ ಮಾಕ್ ಡ್ರಿಲ್‌ನಲ್ಲಿ ಆಯಾ ಆಸ್ಪತ್ರೆಗಳಿಗೆ ಬೇಕಿರೋ ಸೌಲಭ್ಯಗಳ ಬಗ್ಗೆ ಮನವಿ ಮಾಡಲಾಗುವುದು. ಮುಖ್ಯವಾಗಿ ಹೆಲ್ತ್ ಎಮರ್ಜೆನ್ಸಿ ಸೃಷ್ಟಿಯಾಗದಂತೆ ನೋಡಿಕೊಳ್ಳಲು ತಯಾರಿ ನಡೆಸಲಾಗುತ್ತಿದೆ.
ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೆ.ಎಸ್. ರೆಡ್ಡಿ, ಡಾ. ಸೋಮನಾಥ ಮಾತನಾಡಿ ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆ 100 ಹಾಸೆಗಳ ಆಸ್ಪತ್ರೆಯಾಗಿದ್ದು, ಈಗಾಗಲೇ 100 ಬೆಡ್ ಗಳಿಗೆ ಆಕ್ಸಿಜನ್ ವ್ಯವಸ್ಥೆ ಇದೆ.ಇದರಲ್ಲಿ ೪೨ ಕೋವಿಡ್ ರೋಗಗಳಿಗೆ ಮೀಸಲು ಇಡಲಾಗಿದೆ.ಇದರಲ್ಲಿ 22 ಬೆಡ್ ಐಸಿಯು ಮತ್ತು ವೆಂಟಿಲೇಟರ್ ವ್ಯವಸ್ಥೆ ಇದೆ.ಹಿಂದೆ ರೋಗಿಗಳು ಕಂಡುಬಂದರೆ ಸೂಕ್ತವಾದ ಚಿಕಿತ್ಸೆ ನೀಡಲು ಆಸ್ಪತ್ರೆ ಸನ್ನದ್ಧವಾಗಿದೆ.
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಆಕ್ಸಿಜನ್ ವ್ಯವಸ್ಥೆ, ಕೊರತೆ ಆಗಬಾರದು ಎಂಬ ಉದ್ದೇಶದಿಂದ ಡೋರಾ ಸಿಲೆಂಡರ್ 3, ಜಂಬೂ ಸಿಲೆಂಡರ್ 104 ಸೇರಿದಂತೆ 150ಕ್ಕೆ ಹೆಚ್ಚು ಸಿಲಿಂಡರ್ ವ್ಯವಸ್ಥೆ ಇದೆ. ಕೋವಿಡ್ ಸಮರ್ಥವಾಗಿ ಎದುರಿಸಲು ಕಳೆದ ಒಂದು ಮತ್ತು ಎರಡನೇ ಅಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳನ್ನು ಮತ್ತೆ ಕರ್ತವಕ್ಕೆ ನಿವೇಜನೆ ಮಾಡಲಾಗಿದೆ. ಚಿಕಿತ್ಸೆಗೆ ಬೇಕಾದಂತ ಎಲ್ಲಾ ಔಷಧ ಉಪಚಾರಗಳು ಆಸ್ಪತ್ರೆಯಲ್ಲಿ ಲಭ್ಯ ಇರುತ್ತವೆ ಎಂದರು.
ಹಿರಿಯ ಔಷಧ ಅಧಿಕಾರಿ ಮರಿಶಾಂತವೀರ ಸ್ವಾಮಿ, ಕಿರಿಯ ಔಷಧ ಅಧಿಕಾರಿ ಬಸವರಾಜ್ ಗುರುಸ್ಥಳಮಠ, ಶುಶ್ರೂಷಕ ಅಧಿಕಾರಿ ರಾಚಪ್ಪ, ಕಳಕಯ್ಯ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.