ಸೊಳ್ಳೆ ಬತ್ತಿಯಿಂದ ಉಸಿರುಗಟ್ಟಿ 6 ಮಂದಿ ಸಾವು

ಸೊಳ್ಳೆ
Advertisement

ನವದೆಹಲಿ: ದೆಹಲಿಯ ಶಾಸ್ತ್ರಿ ಪಾರ್ಕ್‌ನಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಉಸಿರುಗಟ್ಟಿರುವ ಕಾರಣದಿಂದಲೇ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಾಹಿತಿಯ ಪ್ರಕಾರ, ಗುರುವಾರ ರಾತ್ರಿ, ಸೊಳ್ಳೆ ಓಡಿಸಲು ಬಳಸುವ ಕಾಯಿಲ್ ಹಚ್ಚಿ ಒಂದೇ ಕೋಣೆಯಲ್ಲಿ ಮಲಗಿದ್ದರು. ಕೋಣೆಯ ಬಾಗಿಲು ಮುಚ್ಚಿತ್ತು. ಕಾಯಿಲ್ ಹಾಸಿಗೆಗೆ ತಾಗಿ ಬೆಂಕಿ ಹತ್ತಿಕೊಂಡಿದೆ. ಕೋಣೆಯ ಬಾಗಿಲು ಮುಚ್ಚಿದ್ದ ಕಾರಣ ಕಾರ್ಬನ್ ಮಾನಾಕ್ಸೈಡ್ ಕೋಣೆಯೊಳಗೆ ಹರಡಿಕೊಂಡಿದೆ. ಇದರಿಂದಾಗಿ ಕುಟುಂಬದ 6 ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.