ಸೆ. 30 ಮೈ ಶುಗರ್ ಸಕ್ಕರೆ ಕಾರ್ಖಾನೆ ಸಂಪೂರ್ಣ ಕಾರ್ಯಚರಣೆ: ಗೋಪಾಲಯ್ಯ ಕೆ

Advertisement

ಮೈ ಶುಗರ್ ಸಕ್ಕರೆ ಕಾರ್ಖಾನೆ ಸೆಪ್ಟೆಂಬರ್‌ 30 ರೊಳಗಾಗಿ ಸಂಪೂರ್ಣವಾಗಿ ಚಾಲನೆಗೊಳ್ಳಲಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೆ ಅವರು ತಿಳಿಸಿದರು.

ಅವರ ಇಂದು ಮೈ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಖಾನೆಯ ಕೆಲಸ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಕಾರ್ಖಾನೆಯ ಎರಡನೇ ಬಯ್ಲರ್ ನ ಕಾರ್ಯ ಸೆಪ್ಟೆಂಬರ್ 19 ರಿಂದ
ಪ್ರಾರಂಭವಾಗಬೇಕು ಎಂದರು.

ಮೈ ಶುಗರ್ ಕಾರ್ಯವ್ಯಾಪ್ತಿಗೆ ಬರುವ ಕಬ್ಬನ್ನು‌ ಬೇರೆ ಕಾರ್ಖಾನೆಯವರು ಕಟಾವು ಮಾಡದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಮೈಶುಗರ್ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೇರೆ ಕಡೆಗೆ ಸಾಗಾಣಿಕೆಯಾಗುತ್ತಿದ್ದಲ್ಲಿ ವಶ ಪಡಿಸಿಕೊಳ್ಳಲು ಕ್ರಮ ವಹಿಸಿ ಎಂದರು.