ಸುಪಾರಿ ಪ್ರಕರಣ: ಶವ ಹೊರ ತೆಗೆಯುವ ಕಾರ್ಯ ಶುರು

Advertisement

ಹುಬ್ಬಳ್ಳಿ : ಸುಪಾರಿ ಕೊಲೆ ಪ್ರಕರಣದಲ್ಲಿ ಕೊಲೆಯಾದ ಅಖಿಲ್ ಜೈನ್ (ಮಹಾಜನಶೇಟ್) ಶವ ಹೊರ ತೆಗೆಯುವ ಕಾರ್ಯ ಕಲಘಟಗಿ ತಾಲ್ಲೂಕು ದೇವಿಕೊಪ್ಪ ಗ್ರಾಮದ ಹತ್ತಿರ ಕಬ್ಬಿನ ತೋಟದಲ್ಲಿ ಬುಧವಾರ ಬೆಳಿಗ್ಗೆ ಅರಂಭವಾಗಿದೆ.
ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಶವ ಹೊರ ತೆಗೆಯುವ ಕಾರ್ಯ ನಡೆದಿದೆ.
ಬಂಧಿತ ಮೂವರು ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ. ದೇಹ ಹೊರ ತೆಗೆದ ಬಳಿಕಷ್ಟೇ ಅದು ಅಖಿಲ್ ಶವನಾ ಎಂಬುದು ಗೊತ್ತಾಗಲಿದೆ.