ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ರಾಜ್ಯದಲ್ಲಿ ಒಂದು ಕ್ಷೇತ್ರ ಸಿಗದಂತ ಪರಿಸ್ಥಿತಿ ಇದ್ದು, ಅದಕ್ಕಾಗಿ ಕುಂಡಿ(ಅಂಡು) ಸುಟ್ಟ ಬೆಕ್ಕಿನಂತೆ ಎಲ್ಲೆಡೆ ಓಡಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದಾವಣಗೇರೆಯಲ್ಲಿ ಸಮಾವೇಶ ಮಾಡಿದರು. ಅವರ ಶಿಷ್ಯ ಜಮೀರ ಅಹ್ಮದ ೧೦ ಲಕ್ಷ ಜನ ಸೇರಿದ್ದರು ಅಂತಾ ಹೇಳಿದರು. ರಾಜ್ಯದಲ್ಲಿ 160 ಜನರಲ್ ಕ್ಷೇತ್ರಗಳಿವೆ. ಆದರೂ ಸಿದ್ದರಾಮಯ್ಯಗೆ ಒಂದು ಕ್ಷೇತ್ರ ಸಿಗದಂತಾಗಿದೆ. ಯಾಕೆ ಅಂಡು ಸುಟ್ಟ ಬೆಕ್ಕಿನಂತೆ ರಾಜ್ಯದೆಲ್ಲೆಡೆ ಓಡಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದರು.
ಇನ್ನೊಂದೆಡೆ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಸ್ಪರ್ಧೆ ಬೇಡ ಎಂದು ಸಂತೋಷ ಲಾಡ್ ಹೇಳಿಕೆ ನೀಡಿದ್ದಾರೆ. ಅವರಿಬ್ಬರೂ ಸೋಲುತ್ತಾರೆ ಎಂದು ಅನಿಸಿರಬೇಕು ಎನ್ನುತ್ತಲೇ ಅದು ಅವರ ಆಂತರಿಕ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.